ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಈ ಯೋಜನೆ ಯಾವಾಗ ಜಾರಿ ಆಗುತ್ತದೆ ಎಂದು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.ಈ ಯೋಜನೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಸೌಧದಲ್ಲಿ ಮಾತನಾಡಿದ ಅವರು ಜುಲೈ 19 ರಿಂದ ಗೃಹ ಲಕ್ಷ್ಮೀ ನೋಂದಣಿ ಆರಂಭಿಸಲಾಗುವುದು.
ಮನೆಯ ಯಜಮಾನಿಗೆ ಈ ಯೋಜನೆಯ ಹಣ ಸಿಗಲಿದೆ. ಯಜಮಾನಿ, ಆಕೆಯ ಪತಿ ಆಧಾಯ ತೆರಿಗೆ ಪಾವತಿದಾರರಾಗಿದ್ದರೆ ಅವರಿಗೆ ಯೋಜನೆ ಸಿಗೋದಿಲ್ಲ.
ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಅನ್ನು ಗ್ರಾಮ ಒನ್, ಬಾಪೂಜಿ ಕೇಂದ್ರ,ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನಮ್ಮ ರಾಷ್ಟ್ರೀಯ ನಾಯಕರ ಕಡೆಯಿಂದ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಮಾಡಿಸಲು ನಿರ್ಧರಿಸಿದ್ದೇವೆ.ಮಧ್ಯಾಹ್ನ 2 ಗಂಟೆಯೊಳಗೆ ಕನ್ಪರ್ಮೆಶನ್ ಬರುತ್ತೆ.ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನ ಅರ್ಪೋಚ್ ಮಾಡಿದ್ದೇವೆ.ರಾಷ್ಟ್ರೀಯ ನಾಯಕರು ಒಪ್ಪಿದ್ರೆ ಜುಲೈ 17 ಸೋಮವಾರ ಸಾಯಂಕಾಲ 5 ಗಂಟೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.ರಾಷ್ಟ್ರೀಯ ನಾಯಕರು ಒಪ್ಪದಿದ್ರೆ ಜುಲೈ 19 ರಂದು ಸಿಎಂ ಸಿದ್ದರಾಮಯ್ಯ ನವರು ಉದ್ಘಾಟನೆ ಮಾಡ್ತಾರೆ.ಹಳ್ಳಿಯಲ್ಲಿರುವವರು ಗ್ರಾಮ ಓನ್ ಗೆ ಹೋಗಬೇಕು,ಸಿಟಿಯಲ್ಲಿ ಇರುವವರು ಬೆಂಗಳೂರು ಓನ್ ಗೆ ಹೋಗಬೇಕು.ಈ ಅವಕಾಶವನ್ನ ಮೀಸ್ ಮಾಡಿಕೊಂಡವರು ಪ್ರತಿದಿನ ಸಂಜೆ 5 ರಿಂದ 6 ಗಂಟೆಗೆ ನೊಂದಣಿ ಮಾಡಿಕೊಳ್ಳಬೆಕು. ಈ ಯೋಜನೆ ಕುರಿತು ಸಮಸ್ಯೆಗಳ ಇದ್ರೆ ಟೋಲ್ ಫ್ರೀ ನಂಬರ್ ಗೆ SMS ಅಥವಾ 1902 ಅಥವಾ 8147500500 ಕರೆ ಮಾಡಬಹುದು.
ಇನ್ನೂ ಪ್ರಜಾ ಪ್ರತಿನಿಧಿ ಅಂತ ಸ್ವಯಂ ಸೇವಕರನ್ನು ಸಹ ನೋಂದಣಿಗೆ ನೇಮಕಾ ಮಾಡಲಾಗಿದೆ.ಯೋಜನೆಗೆ ಅಪ್ಲೈ ಮಾಡುವುದಕ್ಕೆ ರಾಜ್ಯದ ಜನತೆ ಇದರ ಲಾಭವನ್ನ ಪಡೆದುಕೊಳ್ಳಬೇಕು.ಯಾರಾದ್ರು ಮಧ್ಯವರ್ತಿಗಳು ಹಣ ತೆಗೆದುಕೊಂಡು ಅಪ್ಲೈ ಮಾಡ್ತಾಯಿದ್ದರೆ ನಮ್ಮ CDP ಅಧಿಕಾರಿಗಳಿಗೆ ದೂರು ನೀಡಬೇಕು.ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಇದಕ್ಕೆ ಯಾವುದೇ ಕಾಲ ಮಿತಿ ಇಲ್ಲ, ಇದು ನಿರಂತರ ಪ್ರಕ್ರಿಯೆ ಆಗಿದೆ.ಯಜಮಾನಿಯ ಆಧಾರ್ ಕಾಡ್೯ ಲಿಂಕ್ ಇಲ್ಲ ಅಂದ್ರೆ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋಗಬೇಕು.ಹೆಚ್ಚು ಸಂಖ್ಯೆ ನೊಂದಣಿ ಯಾದ್ರೆ ಪಾಸ್ ಬುಕ್ ನಲ್ಲಿ ಇದ್ದ ಮನೆಯ ಮುಖ್ಯಸ್ಥೆ ಹೆಸರು ಇದ್ದರೆ ಅವರ ಮನೆಗೆ ತೆರಳಿ ಪರಿಶೀಲನೆ ಮಾಡಿ ಪತ್ರವನ್ನ ಕೊಡುತ್ತೇವೆ.SMS ಮೂಲಕ ದಿನಾಂಕವನ್ನ ತಿಳಿಸುತ್ತೆವೆ.ಆಧಾರ್ ಕಾಡ್೯ ಇರುವ ಪೋನ್ ನಂಬರ್ ಸಂಖ್ಯೆ ತೆಗೆದುಕೊಂಡು ಹೋಗಬೇಕು.1 ಕೋಟಿ 20 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ ಎಂದು ಹೇಳಿದರು.