Select Your Language

Notifications

webdunia
webdunia
webdunia
webdunia

ಕನ್ನಲ್ಲಿಯಲ್ಲಿ ಕಾಂಗ್ರೆಸ್ ಉತ್ಸವ

Congress festival in Kannalli
bangalore , ಭಾನುವಾರ, 16 ಜುಲೈ 2023 (18:58 IST)
ಕಾಂಗ್ರೆಸ್‌ ಪಕ್ಷದ ಐದು ಗ್ಯಾರಂಟಿಗಳಿಗೆ ಸರ್ಕಾರ ನುಡಿದಂತೆ ನಡೆದು ಸಾಬೀತು ಪಡಿಸಿದೆ ಎಂದು ಯಶವಂತಪುರ ವ್ಯಾಪ್ತಿಯ ಕೋಡಿಗೆಹಳ್ಳಿಯ ಕನ್ನಲ್ಲಿಯಲ್ಲಿ ಕಾಂಗ್ರೆಸ್ ಉತ್ಸವ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರವನ್ನು ಬಲಪಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕನ್ನಲ್ಲಿಯ ಜನತೆಗೆ ಅನುಕೂಲವಾಗಲೆಂದು ಅಲ್ಲಿಯೇ ಕಾಂಗ್ರೆಸ್ ಕಚೇರಿ ಸ್ಥಾಪನೆ ಮಾಡಲಾಗಿದ್ದು, ಇಂದು ಅಧಿಕೃತವಾಗಿ ಚಾಲನೆ ನೀಡಿದ್ರು. ನಂತರ ಜಿಲ್ಲಾಧ್ಯಕ್ಷ ಎಂ ರಾಜ್ ಕುಮಾರ್, ಯಶವಂತಪುರ ಕ್ಷೇತ್ರದ ನಾಯಕ ಎಸ್ ಬಾಲರಾಜ್ ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ, ತಾವರಕೆರೆ ಬ್ಲಾಕ್ ಅಧ್ಯಕ್ಷ ರಾಮಮೂರ್ತಿ, ಕನ್ನಲ್ಲಿಯ ಹಿರಿಯ ಮುಖಂಡ ಜಯಣ್ಣ, ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಪಂಚಾಯಿತಿ ನೂತನ ಅಭ್ಯರ್ಥಿ ಗಿರಿಜಾವತಿ ಸೇರಿದಂತೆ ಕನ್ನಲ್ಲಿಯ ಎಲ್ಲ ಜನತೆ ಭಾಗಿಯಾಗಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರ್‌ಗ್ರಿಸ್ ವಂಚನೆ, ಮೂವರ ಬಂಧನ