Select Your Language

Notifications

webdunia
webdunia
webdunia
webdunia

ಮೈಕ್ರೋ ಫೈನಾನ್ಸ್​​​​​​​ ಕಿರುಕುಳಕ್ಕೆ ಕಡಿವಾಣ: 2-3 ದಿನಗಳಲ್ಲಿ ಸುಗ್ರೀವಾಜ್ಞೆ ಎಂದ ಪರಮೇಶ್ವರ್‌

Harassment of Micro Finance

Sampriya

ಬೆಂಗಳೂರು , ಶುಕ್ರವಾರ, 31 ಜನವರಿ 2025 (15:43 IST)
ಬೆಂಗಳೂರು: ಮೈಕ್ರೋ ಫೈನಾನ್ಸ್​​​​​​​ ಕಿರುಕುಳಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು 2-3 ದಿನಗಳಲ್ಲಿ  ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್​​​ ತಿಳಿಸಿದರು.

ಇನ್ನೆರಡು ಮೂರು ದಿನಗಳಲ್ಲಿ ಸುಗ್ರೀವಾಜ್ಞೆ ಬಗ್ಗೆ ಅಂತಿಮ ತಿರ್ಮಾನವನ್ನು ಸಿಎಂ ತಗೋತಾರೆ. ಸಿಎಂ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಕಾನೂನು, ಸಂಸದೀಯ ವ್ಯವಹಾರ, ಆರ್ಥಿಕ‌ ಇಲಾಖೆ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಈಗಾಗಲೇ ಹಲವು ಕಾನೂನುಗಳಿವೆ ಈ ಕಾನೂನುಗಳ ಅಧ್ಯಯನ ನಡೆಸಿ ಹೊಸ ಕಾನೂನು ಮಾಡಲಾಗುತ್ತದೆ ಎಂದು ಹೇಳಿದರು.

ಯಾವಾಗ ಸುಗ್ರೀವಾಜ್ಞೆ ಹೊರಡಿಸಬೇಕು ಅಂತ ಸಮಯ ನಿಗದಿಗೊಳಿಸಿಲ್ಲ. ಜನರಿಗೆ ಕಿರುಕುಳ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ, ಆತ್ಮಹತ್ಯೆ, ಊರು ಬಿಡುವ ಘಟನೆಗಳು ಆಗುತ್ತಿವೆ. ಇದು ನಿಲ್ಲಬೇಕು, ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕು ಎಂದರು.

ಕಾನೂನು ಮೂಲಕ ಕಿರುಕುಳ ನಿಯಂತ್ರಣ ಮಾಡೋದು ನಮ್ಮ ಉದ್ದೇಶ. ನಾವು ತರುವ ಕಾನೂನನ್ನು ಕೋರ್ಟಿನಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಪ್ರಶ್ನೆ ಮಾಡದಂತೆ ರೂಪಿಸುತ್ತೇವೆ. ಬೇರೆ ರಾಜ್ಯಗಳ ಕಾನೂನು ಅಧ್ಯಯನ ಮಾಡಿ ಹೊಸ ಕಾನೂನು ತರುತ್ತೇವೆ ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು ನೀಡಿ ಮಹತ್ವದ ಆದೇಶ