Publish Date: Wed, 24 Jun 2020 (09:34 IST)
Updated Date: Wed, 24 Jun 2020 (09:36 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಹಾಡಿನ ಚಿತ್ರೀಕರಣವೊಂದು ಬಿಟ್ಟು ಉಳಿದೆಲ್ಲಾ ಕೆಲಸ ಪೂರ್ತಿಯಾಗಿದೆ. ಆದರೆ ಹಾಡಿನ ಚಿತ್ರೀಕರಣ ಮಾಡಲು ಅಡ್ಡಿ ಆತಂಕಗಳು ಮುಗಿಯುತ್ತಿಲ್ಲ.
ಲಾಕ್ ಡೌನ್ ಗೂ ಮೊದಲೇ ಯುವರತ್ನ ಹಾಡುಗಳ ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ ಕೊರೋನಾ ಹಾವಳಿಯಿಂದಾಗಿ ಸಾಧ್ಯವಾಗಲಿಲ್ಲ. ಹೀಗಾಗಿ ಲಾಕ್ ಡೌನ್ ಮುಗಿದ ಮೇಲೆ ನೆರೆ ರಾಜ್ಯಗಳಿಗೆ ಹೋಗಿ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿತ್ತು.
ಆದರೆ ಕೊರೋನಾ ನಿಯಂತ್ರಣಕ್ಕೆ ಬಾರದ ಕಾರಣ ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಿಲ್ಲ. ಪರಿಸ್ಥಿತಿ ಹದವಾಗುವವರೆಗೂ ಯುವರತ್ನ ಹಾಡಿನ ಚಿತ್ರೀಕರಣ ಕಷ್ಟ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಂಕಟ ಹೊರಹಾಕಿದ್ದಾರೆ.