Publish Date: Thu, 07 Nov 2019 (09:52 IST)
Updated Date: Thu, 07 Nov 2019 (09:54 IST)
ಬೆಂಗಳೂರು: ಎರಡನೇ ಮಗುವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ‍್ಯಮಗಳೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಾತನಾಡಿದ್ದಾರೆ.
ಈ ವೇಳೆ ಮಾಧ‍್ಯಮ ವರದಿಗಾರರೊಬ್ಬರು ಯಶ್ ಬಳಿ, ಒಂದು ಗಂಡು, ಒಂದು ಹೆಣ್ಣು ಮಗು ಸೇರಿ ಇಬ್ಬರು ಮಕ್ಕಳಿಗೆ ಅಪ್ಪನಾಗಿದ್ದೀರಿ. ಮೂರನೇ ಮಗುವಿನ ಪ್ಲ್ಯಾನ್ ಇದೆಯಾ ಎಂದು ಕೇಳಿದ್ದಾರೆ. ಇದಕ್ಕೆ ರಾಧಿಕಾ ಮತ್ತು ಯಶ್ ಕೊಟ್ಟ ಉತ್ತರವೇನು ಗೊತ್ತಾ?
ಪತ್ರಕರ್ತರ ಪ್ರಶ್ನೆಯಿಂದ ಇರಿಸು ಮುರಿಸಿಗೊಳಗಾದ ಯಶ್ ‘ಏಯ್.. ಎಲ್ಲಾ ನಿಮಗೆ ಹೇಳ್ಬಿಟ್ಟೇ ಮಾಡಕ್ಕಾಗುತ್ತಾ?’ ಎಂದು ಸುಮ್ಮನಿರುವಂತೆ ಕೈ ಸನ್ನೆ ಮಾಡಿದರು. ಅತ್ತ ರಾಧಿಕಾ ಕೂಡಾ ನಗುತ್ತಲೇ ಆ ಪತ್ರಕರ್ತನ ಪ್ರಶ್ನೆಯನ್ನು ಆಕ್ಷೇಪಿಸಿದರು.