Select Your Language

Notifications

webdunia
webdunia
webdunia
webdunia

ಗೋವುಗಳಿಗೆ ನೆರವಾದ ರಾಕಿಂಗ್ ಸ್ಟಾರ್ ಯಶ್

ಗೋವುಗಳಿಗೆ ನೆರವಾದ ರಾಕಿಂಗ್ ಸ್ಟಾರ್ ಯಶ್
ಮಂಡ್ಯ , ಮಂಗಳವಾರ, 21 ಜನವರಿ 2020 (09:22 IST)
ಮಂಡ್ಯ: ಪ್ರಾಣಿಪ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೋ ಶಾಲೆಗಳಿಗೆ ಮೇವು ಒದಗಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡಾ ಅವರದ್ದೇ ಹಾದಿಯಲ್ಲಿದ್ದಾರೆ.


ಪಾಂಡವಪುರ ತಾಲೂಕಿನ ಗೋಶಾಲೆಗೆ ಹೆಚ್ಚುವರಿ ಶೆಡ್ ನಿರ್ಮಾಣ ಮಾಡಲು ನೆರವು ಬೇಕಾಗಿತ್ತು. ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆ ಮೂಲಕ ನೆರವು ನೀಡುತ್ತಿದ್ದಾರೆ. ಇದಕ್ಕೆ ಸುಮಾರು 15 ಲಕ್ಷ ರೂ. ಖರ್ಚಾಗಲಿದ್ದು, ಅದನ್ನು ಅವರು ತಮ್ಮ ಸಂಸ್ಥೆ ಮೂಲಕ ಪೂರೈಸಲಿದ್ದಾರೆ.

ಯಶೋಮಾರ್ಗ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಕೆರೆಗಳ ಪುನರೋತ್ಥಾನ ಮುಂತಾದ ಜನಪರ ಕೆಲಸ ಮಾಡಿದ್ದ ಯಶ್ ಮತ್ತು ತಂಡ ಈಗ ಈ ಮೂಲಕ ಪ್ರಾಣಿಗಳಿಗೂ ನೆರವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾಗಿ ತಿಂಗಳು ಕಳೆದಿಲ್ಲ, ಆಗಲೇ ಟಿವಿಯಲ್ಲಿ ಈ ಸೂಪರ್ ಹಿಟ್ ಸಿನಿಮಾ!