Select Your Language

Notifications

webdunia
webdunia
webdunia
webdunia

ಬಿಡುಗಡೆಯಾಗಿ ತಿಂಗಳು ಕಳೆದಿಲ್ಲ, ಆಗಲೇ ಟಿವಿಯಲ್ಲಿ ಈ ಸೂಪರ್ ಹಿಟ್ ಸಿನಿಮಾ!

ಬಿಡುಗಡೆಯಾಗಿ ತಿಂಗಳು ಕಳೆದಿಲ್ಲ, ಆಗಲೇ ಟಿವಿಯಲ್ಲಿ ಈ ಸೂಪರ್ ಹಿಟ್ ಸಿನಿಮಾ!
ಬೆಂಗಳೂರು , ಮಂಗಳವಾರ, 21 ಜನವರಿ 2020 (09:08 IST)
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಕೆಲವೇ ದಿನಕ್ಕೆ ಟಿವಿಯಲ್ಲಿ ಹೊಚ್ಚ ಹೊಸ ಸಿನಿಮಾಗಳು ಪ್ರಸಾರವಾಗುವುದು ಹೊಸದಲ್ಲ. ಆದರೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆಯುವ ಮೊದಲೇ ಟಿವಿಯಲ್ಲಿ ಪ್ರಸಾರವಾಗುವ ಸುದ್ದಿ ಬಂದಿದೆ.


ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲೂ ಬಿಡುಗಡೆಯಾಗಿತ್ತು. ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಆ ಸಿನಿಮಾವನ್ನು ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರ ಮಾಡುತ್ತಿರುವುದಾಗಿ ಸುವರ್ಣ ವಾಹಿನಿ ಘೋಷಿಸಿದೆ.

ಅವನೇ.. ಸಿನಿಮಾ ಹಕ್ಕನ್ನು ಸುವರ್ಣ ವಾಹಿನಿ ಖರೀದಿ ಮಾಡಿತ್ತು. ಆದರೆ ಯಾವಾಗ ಸಿನಿಮಾ ಪ್ರಸಾರ ಮಾಡುತ್ತಿದ್ದೇವೆ ಎಂಬುದನ್ನು ವಾಹಿನಿ ಪ್ರಕಟಿಸಿಲ್ಲ. ಆದರೆ ಸದ್ಯದಲ್ಲೇ ನಾರಾಯಣನ ದರ್ಶನವಾಗಲಿರುವುದಂತೂ ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ತಲ್ವಾರ್ ನಿಂದ ಕೇಕ್ ಕಟ್ ; ನಟ ದುನಿಯಾ ವಿಜಯ್ ವಿರುದ್ಧ ಎಫ್ ಐ ಆರ್