Select Your Language

Notifications

webdunia
webdunia
webdunia
webdunia

ಡಿ ಬಾಸ್ ದರ್ಶನ್ ಗೆ ನಾಯಕಿಯಾಗುತ್ತಿರುವ ರಚನಾ ರೈ ಯಾರು, ಅವರ ಹಿನ್ನಲೆಯೇನು

Rachana Rai

Krishnaveni K

ಬೆಂಗಳೂರು , ಶನಿವಾರ, 18 ಮೇ 2024 (12:05 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಡೆವಿಲ್ ದಿ ಹೀರೋ ಸಿನಿಮಾಗೆ ನಾಯಕಿಯಾಗಿ ರಚನಾ ರೈ ಎಂಬ ಕರಾವಳಿ ಬೆಡಗಿ ಆಯ್ಕೆಯಾಗಿದ್ದಾರೆ.

ದರ್ಶನ್ ತಮ್ಮೆಲ್ಲಾ ಸಿನಿಮಾಗಳಲ್ಲಿ ಕನ್ನಡ ಪ್ರತಿಭೆಗಳಿಗೇ ಅವಕಾಶ ನೀಡುತ್ತಾರೆ. ಅದನ್ನು ಈ ಸಿನಿಮಾದಲ್ಲೂ ಪಾಲಿಸಿದ್ದಾರೆ. ಮಂಗಳೂರು ಮೂಲದ ಸುಂದರ ರಚನಾ ರೈಗೆ ಕನ್ನಡದಲ್ಲಿ ದರ್ಶನ್ ಗೆ ನಾಯಕಿಯಾಗುವ ಅದೃಷ್ಟ ಖುಲಾಯಿಸಿದೆ. ಅವರ ಹಿನ್ನಲೆಯೇನು ತಿಳಿದುಕೊಳ್ಳೋಣ.

ರಚನಾ ರೈ ಮೂಲತಃ ಮಂಗಳೂರಿನವರು. ತುಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಈ ಮೊದಲು ಧನ್ವೀರ್ ಗೌಡ ಅವರ ವಾಮನ ಸಿನಿಮಾದಲ್ಲಿ ಪಾತ್ರ ಮಾಡಿದ್ದರು. ಇದೀಗ ಡಿ ಬಾಸ್ ಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ನಟನೆ ಮಾತ್ರವಲ್ಲದೆ, ರಚನಾ ಕ್ರೀಡಾಳು ಕೂಡಾ. ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್  ಆಟಗಾರ್ತಿ ಮತ್ತು ಬರಹಗಾರ್ತಿ ಕೂಡಾ ಹೌದು.

ಇದಕ್ಕೆ ಮೊದಲು ಕಾಟೇರ ಸಿನಿಮಾದಲ್ಲಿ ದರ್ಶನ್ ಮಾಲಾಶ್ರೀ ಪುತ್ರಿ ಆರಾಧನಾಗೆ ಅವಕಾಶ ಕೊಟ್ಟಿದ್ದರು. ಇದಕ್ಕೆ ಮೊದಲು ರಾಬರ್ಟ್ ಸಿನಿಮಾದಲ್ಲಿ ಕನ್ನಡದವರೇ ಆದ ಆಶಾ ಭಟ್ ಅವರಿಗೆ ಅವಕಾಶ ನೀಡಿದ್ದರು. ಇದೀಗ ಮತ್ತೊಬ್ಬ ಕನ್ನಡ ಪ್ರತಿಭೆಯನ್ನು ದರ್ಶನ್ ಪರಿಚಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲೇ ಸುಳಿವು ನೀಡಿ ನೇಣಿಗೆ ಶರಣಾದ ನಟಿ ಪವಿತ್ರಾ ಜಯರಾಂ ಗೆಳೆಯ ಚಂದ್ರು