Select Your Language

Notifications

webdunia
webdunia
webdunia
webdunia

ಪ್ರಭಾಸ್ ಮದುವೆ ಸುದ್ದಿ ಬೆನ್ನಲ್ಲೇ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಮುನ್ನಲೆಗೆ

Anushka Shetty

Krishnaveni K

ಹೈದರಾಬಾದ್ , ಶುಕ್ರವಾರ, 17 ಮೇ 2024 (16:52 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಭಾಸ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗುತ್ತಿದೆ ಎಂದು ಪೋಸ್ಟ್ ಮಾಡಿದ ಬೆನ್ನಲ್ಲೇ ಈಗ ಅನುಷ್ಕಾ ಶೆಟ್ಟಿ ಮದುವೆ ಸುದ್ದಿಯೂ ಜೋರಾಗಿ ಸದ್ದು ಮಾಡುತ್ತಿದೆ.

ಬಾಹುಬಲಿ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಬ್ರೇಕ್ ಅಪ್ ಆಗಿದ್ದರು ಎಂಬ ಗಾಸಿಪ್ ಗಳಿವೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದಿದ್ದಂತೂ ನಿಜ. ಹೀಗಾಗಿಯೇ ಫ್ಯಾನ್ಸ್ ಇವಿರಬ್ಬರೂ ಮದುವೆಯಾಗಲಿ ಎಂದು ಆಗ್ರಹಿಸುತ್ತಿದ್ದರು. ಆದರೆ ಕೊನೆಗೂ ಇಬ್ಬರೂ ಬ್ರೇಕಪ್ ಆದ ಸುದ್ದಿ ತಿಳಿದು ಫ್ಯಾನ್ಸ್ ನಿರಾಸೆಗೊಂಡಿದ್ದರು.

ಈ ನಡುವೆ ಪ್ರಭಾಸ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ತಮ್ಮ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿಯ ಆಗಮನವಾಗುತ್ತಿದೆ. ಸದ್ಯದಲ್ಲೇ ಆ ಬಗ್ಗೆ ಮಾಹಿತಿ ನೀಡುವೆ ಎಂದು ಪೋಸ್ಟ್ ಮಾಡಿಕೊಂಡರು. ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಮದುವೆ ಸುದ್ದಿ ನೀಡುತ್ತಾರೆ ಎಂದೇ ಅಂದುಕೊಂಡಿದ್ದಾರೆ.

ಇದರ ನಡುವೆಯೇ ಈಗ ಅನುಷ್ಕಾ ಮದುವೆ ಸುದ್ದಿಯೂ ಮುನ್ನಲೆಗೆ ಬಂದಿದೆ. ಅನುಷ್ಕಾ ಕನ್ನಡದ ಖ್ಯಾತ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿಬರುತ್ತಿದೆ. ಈ ಮೊದಲೂ ಹೀಗೊಂದು ಸುದ್ದಿ ಹರಿದಾಡಿತ್ತು. ಆದರೆ ಈಗ ಮತ್ತೊಮ್ಮೆ ಅದೇ ಸುದ್ದಿ ಕೇಳಿಬರುತ್ತಿದೆ. ಸದ್ಯದಲ್ಲೇ ಸ್ವೀಟಿ ಅನುಷ್ಕಾ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹಳೆಯ ಲವ್ ಬರ್ಡ್ಸ್ ಒಟ್ಟಿಗೇ ಗುಡ್ ನ್ಯೂಸ್ ಕೊಡುತ್ತಾರಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜೀವನಕ್ಕೆ ವಿಶೇಷ ವ್ಯಕ್ತಿ ಆಗಮನವಾಗುತ್ತಿದೆ ಎಂಬ ಪ್ರಭಾಸ್ ಮೆಸೇಜ್ ವೈರಲ್