Select Your Language

Notifications

webdunia
webdunia
webdunia
webdunia

ಕುಡ್ಲದ ಬೆಡಗಿಗೆ ಖುಲಾಯಿಸಿದ ಅದೃಷ್ಟ: ಡಿ ಬಾಸ್‌ಗೆ ಜೋಡಿಯಾದ ರಚನಾ ರೈ

Rachana Rai

Sampriya

ಬೆಂಗಳೂರು , ಶುಕ್ರವಾರ, 17 ಮೇ 2024 (18:49 IST)
photo Courtesy Instagram
ಬೆಂಗಳೂರು:  ಕುಡ್ಲದ ಬೆಡಗಿ ರಚನಾ ರೈ ಅವರಿಗೆ ಅದೃಷ್ಟ ಖುಲಾಯಿಸಿದೆ. ಬಾಕ್ಸ್‌ ಆಫೀಸ್ ಸುಲ್ತಾನ ದರ್ಶನ್ ಚಿತ್ರದಲ್ಲಿ  ನಾಯಕಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಪ್ರಕಾಶ್ ವೀರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾಗೆ ನಾಯಕಿಯ ತುಳುನಾಡ ಬೆಡಗಿ ರಚನಾ ರೈ ಆಯ್ಕೆಯಾಗಿದ್ದಾರೆ.

ರಚನಾ ಅವರು ಈ ಹಿಂದೆ ಶಂಕರ್ ರಾಮನ್ ನಿರ್ದೇಶನದ ವಾಮನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರಯು. ಅದಲ್ಲದೆ ತುಳು ಸಿನಿಮಾದಲ್ಲೂ ನಟಿಸಿದ್ದರು.  

ಬ್ಯಾಡ್ಮಿಂಟನ್ ಪ್ಲೇಯರ್‌ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಈಗ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಹೇಳಿರುವ ಡೈಲಾಗ್ 'ಡೆವಿಲ್' ಮೊದಲ ಟೀಸರ್‌ನಲ್ಲಿತ್ತು. ಈಗ ಇದರ ವಿಡಿಯೋ ಬಿಡಲಾಗಿದೆ. ಕಲರ್‌ಫುಲ್‌ ಲೋಕೇಷನ್‌ನಲ್ಲಿ ದರ್ಶನ್ ಸಖತ್ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ಸೆಲೆಬ್ರೇಶನ್ ಫೋಟೋ ಹಂಚಿ ಪ್ರೀತಿಗೆ ಸದಾ ಚಿರಋಣಿ ಎಂದಾ ಮಾಧುರಿ ದೀಕ್ಷಿತ್