Publish Date: Thu, 09 May 2024 (15:12 IST)
Updated Date: Thu, 09 May 2024 (15:14 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಬಾಲಿವುಡ್ ನಟರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತನಗೆ ಯಾವ ಬಾಲಿವುಡ್ ನಟ ಇಷ್ಟ ಎನ್ನುವುದನ್ನು ಹೇಳಿಕೊಂಡಿದ್ದಾರೆ.
ದರ್ಶನ್ ಸಂದರ್ಶನವೊಂದರ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್ ಯಾವತ್ತೂ ಕನ್ನಡ ಸಿನಿಮಾಗಳ ಪರ ಮಾತನಾಡುತ್ತಾರೆ. ಪರಭಾಷೆಗಳಿಗೆ ಹೋಗೋದಿಲ್ಲ. ಕನ್ನಡವೇ ನನಗೆ ಮೊದಲು ಎನ್ನುತ್ತಾರೆ. ಆದರೆ ದರ್ಶನ್ ಗೂ ಬಾಲಿವುಡ್ ಸಿನಿಮಾ ನೋಡುವ ಅಭ್ಯಾಸವಿದೆ ಎಂಬುದು ಈ ವಿಡಿಯೋದಲ್ಲಿ ಬಹಿರಂಗವಾಗಿದೆ.
ದರ್ಶನ್ ತಾನು ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ಅವರಿಗೆ ಅಮಿತಾಭ್ ಅವರನ್ನು ಒಮ್ಮೆ ಭೇಟಿಯಾಗಬೇಕೆಂಬ ಆಸೆಯಿದೆಯಂತೆ. ಆದರೆ ಅದು ಸಾಮಾನ್ಯ ಭೇಟಿಯಾಗಿರಬಾರದು ಎಂಬ ಆಸೆಯೂ ಇದೆ ಎಂದು ದರ್ಶನ್ ಹೇಳಿಕೊಳ್ಳುವ ವಿಡಿಯೋ ವೈರಲ್ ಆಗಿದೆ.
ಹಿಂದಿಯಲ್ಲೂ ನನಗೆ ಸ್ನೇಹಿತರಿದ್ದಾರೆ. ಅಲ್ಲಿ ಅಭಿನಯಿಸಲು ನನಗೆ ಆಫರ್ ಕೊಡುತ್ತಾರೆ. ಸೌತ್ ಇಂಡಿಯಾ ಸಿನಿಮಾದವರು ಎಂದರೆ ಅವರು ವೆಲ್ ಕಮ್ ಮಾಡಿಯೇ ಮಾಡುತ್ತಾರೆ. ಜನರ ಮಧ್ಯೆ ನಿಂತು ಅವರನ್ನು ನೋಡಬೇಕು ಎಂದು ದರ್ಶನ್ ಹೇಳುತ್ತಾರೆ. ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ ದರ್ಶನ್ ಇದೀಗ ಕಾಟೇರ ಸಕ್ಸಸ್ ಆದ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.