Select Your Language

Notifications

webdunia
webdunia
webdunia
webdunia

ಸಾಲುಮರದ ತಿಮ್ಮಕ್ಕನ ಬಗ್ಗೆ ಗೌರವ ಹೊಂದಿದ್ದ ನಟ ವಿವೇಕ್

ಸಾಲುಮರದ ತಿಮ್ಮಕ್ಕನ ಬಗ್ಗೆ ಗೌರವ ಹೊಂದಿದ್ದ ನಟ ವಿವೇಕ್
ಚೆನ್ನೈ , ಶನಿವಾರ, 17 ಏಪ್ರಿಲ್ 2021 (10:02 IST)
ಚೆನ್ನೈ: ಖ್ಯಾತ ತಮಿಳು ನಟ ವಿವೇಕ್ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಕೇವಲ ತಮಿಳು ಚಿತ್ರರಂಗ ಮಾತ್ರವಲ್ಲ, ಕನ್ನಡ ನಾಡಿನಲ್ಲೂ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.


ಇದಕ್ಕೆ ಕಾರಣ ವಿವೇಕ್ ಕೇವಲ ನಟರಾಗಿರಲಿಲ್ಲ. ಅಪ್ಪಟ ಪರಿಸರವಾದಿಯಾಗಿದ್ದರು. ತಮ್ಮ ಪುತ್ರನ ಅಕಾಲಿಕ ಸಾವಿನ ಬಳಿಕ ವಿವೇಕ್ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 30 ಲಕ್ಷ ಗಿಡಗಳನ್ನು ನೆಟ್ಟ ಹೆಮ್ಮೆ ಅವರದ್ದು.

ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಎರಡು ಮಾತನಾಡಲು ತೊದಲಿದಾಗ ಸ್ವತಃ ವೇದಿಕೆಯಲ್ಲಿದ್ದ ವಿವೇಕ್ ತಿಮ್ಮಕ್ಕನ ಬಗ್ಗೆ ಹೆಮ್ಮೆಯಿಂದಲೇ ಭಾಷಣವನ್ನೇ ಮಾಡಿದ್ದರು. ಅಷ್ಟೇ ಅಲ್ಲ, ಆ ಕಾರ್ಯಕ್ರಮದಲ್ಲಿ ತಿಮ್ಮಕ್ಕನನ್ನು ಮಹಾಮಾತೆ ಎಂದು ಪಾದಕ್ಕೆ ಬಿದ್ದು ನಮಸ್ಕರಿಸಿದ್ದನ್ನು ಕನ್ನಡಿಗರು ಯಾವತ್ತಿಗೂ ಮರೆಯಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಿಕ್ರಮ್ ಜೊತೆಗಿನ ಜೂನಿಯರ್ ಎನ್ ಟಿಆರ್ ಚಿತ್ರ ಸ್ಥಗಿತಗೊಳ್ಳಲು ಕಾರಣವೇನು?