Publish Date: Mon, 28 Dec 2020 (07:22 IST)
Updated Date: Mon, 28 Dec 2020 (07:26 IST)
ಚೆನ್ನೈ : ನಟ ರಜನೀಕಾಂತ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಈ ವಿಚಾರ ತಿಳಿದ ನಟ ಪವನ್ ಕಲ್ಯಾಣ ಅವರು ಬೇಗ ಹುಷಾರಾಗಲಿ ಎಂದು ಹಾರೈಸಿದ್ದಾರೆ.
ನಟ ರಜನೀಕಾಂತ್ ಅವರನ್ನು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಪವನ್ ಕಲ್ಯಾಣ್, ಅವರು ತುಂಬಾ ಧೈರ್ಯಶಾಲಿ, ಆಧ್ಯಾತ್ಮಿಕ ಮಾತ್ರವಲ್ಲ ಅವರಿಗೆ ದೇವರ ಆಶೀರ್ವಾದವಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.