Publish Date: Sat, 26 Dec 2020 (09:01 IST)
Updated Date: Sat, 26 Dec 2020 (09:07 IST)
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ನಟ ವಿಜಯ್ ಹಾಗೂ ನಟ ವಿಜಯ್ ಸೇತುಪತಿ ಪ್ರಪ್ರಥಮಬಾರಿಗೆ ಜೊತೆಯಾಗಿ ನಟಿಸಿದ ಬಹುನಿರೀಕ್ಷೆಯ ಚಿತ್ರ ಮಾಸ್ಟರ್ ಗಾಗಿ ಅಭಿಮಾನಿಗಳು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಬೇಕಿದ್ದ ಚಿತ್ರ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು. ಇದೀಗ ಚಿತ್ರ ಮುಂದಿನ ತಿಂಗಳು ಪೊಂಗಲ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದೀಗ ಪೊಂಗಲ್ ಕೇವಲ 20 ದಿನಗಳು ಬಾಕಿ ಇರುವಾಗ ಸೆನ್ಸಾರ್ ಪ್ರಮಾಣ ಪತ್ರ ನೀಡಿದೆ.
ಹೌದು. ಮಾಸ್ಟರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದ್ದು, ಇದೀಗ ಚಿತ್ರತಂಡ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಲಾಗಿದೆ.