Publish Date: Fri, 25 Dec 2020 (11:13 IST)
Updated Date: Fri, 25 Dec 2020 (11:18 IST)
ಚೆನ್ನೈ : ಅನ್ನಾಥಾ ಶಿವ ನಿರ್ದೇಶನದ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಚಿತ್ರ, ಈ ಚಿತ್ರದ ಚಿತ್ರೀಕರಣಡಿಸೆಂಬರ್ 15 ರಿಂದ ಹೈದರಾಬಾದ್ ನಲ್ಲಿ ನಡೆಯುತ್ತಿದೆ.
ಈ ಚಿತ್ರದಲ್ಲಿ ನಟಿಸಿದ ಸೆಲೆಬ್ರಿಟಿಗಳು ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಆದರೆ ಇದೀಗ ಯಾವುದೇ ತೊಂದರೆ ಇಲ್ಲದೇ ತಡೆಯುತ್ತಿದ್ದ ಅನ್ನಾಥಾ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ.
ಕಾರಣವೇನೆಂದರೆ ಚಿತ್ರತಂಡದ ಕೆಲವು ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆಯಂತೆ. ಹಾಗಾಗಿ ರಜನೀಕಾಂತ್ ಕೂಡ ಕೊರೊನಾ ಪರೀಕ್ಷೆ ಮಾಡಿಸಿದ್ದು ಅವರಿಗೆ ನೆಗೆಟಿವ್ ಬಂದಿದೆ ಎನ್ನಲಾಗಿದೆ.