Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದೇನು?

ರಕ್ಷಿತ್ ಶೆಟ್ಟಿ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದೇನು?
ಬೆಂಗಳೂರು , ಶನಿವಾರ, 6 ಅಕ್ಟೋಬರ್ 2018 (15:57 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರು ನಟ ರಕ್ಷಿತ್ ಶೆಟ್ಟಿ ಅವರನ್ನು ನನ್ನ ಮಗನಷ್ಟೇ ಪ್ರೀತಿಸುವೆ ಎಂದು ಹೇಳುವುದರ ಮೂಲಕ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಮೇಲೆ ಜಗ್ಗೇಶ್ ಗೆ ಯಾಕಿಷ್ಟು ಪ್ರೀತಿ ಗೊತ್ತಾ?


ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಕಂಡ ಅದ್ಭುತ ಸಜ್ಜನಿಕೆಯ ಕಲಾಬಂಧು. ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ. ಇವನಿಗೆ ದೇವರ ದಯೆಯಿಂದ ಇನ್ನೂ ಎತ್ತರದ ದಿನಗಳು ಕಾದಿದೆ ಎಂದು ನನ್ನ ಮನ ಹೇಳಿತು. ನಮ್ಮ ಯಶಸ್ಸು ಕಬಳಿಸಿ ಮೇಲೇರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ. ಇದು ಪ್ರಾಪಂಚಿಕ ವಾಮಮಾರ್ಗ ತಂತ್ರ. ಇಂಥವರನ್ನು ನಗುತ್ತಾ ಪಕ್ಕ ತಳ್ಳುವ ಕಲೆ ಕರಗತವಾಗಲಿ ಮುಂದೆ ಎಂದು ಹೇಳುತ್ತಾ ಶುಭರಾತ್ರಿ, ಸವಿಗನಸು ಎಂದು ಟ್ವೀಟ್ ಮಾಡಿದ್ದಾರೆ.


ಜಗ್ಗೇಶ್ ಅವರ ಟ್ವೀಟ್‍ಗೆ ಅಭಿಮಾನಿಗಳು ರೀ-ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ನೀವು ಹೇಳಿದಂತೆ 100% ಆಗುತ್ತದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು  ರಕ್ಷಿತ್ ಮೇಲೆ ನಿಮಗೆ  ಅಷ್ಟೊಂದು ಲವ್ ಎಂದು ಕೇಳಿದಾಗ ಅದಕ್ಕೆ ಜಗ್ಗೇಶ್ ಅವರು ನನ್ನ ಮಗನಷ್ಟೆ ಪ್ರೀತಿಸುವೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ದಿ ವಿಲನ್’ ಚಿತ್ರತಂಡದಲ್ಲಿ ಅಸಮಾಧಾನದ ಹೊಗೆ ಯಾಕೆ ಕಾಣಿಸಿಕೊಂಡಿದೆ ಗೊತ್ತಾ?