Select Your Language

Notifications

webdunia
webdunia
webdunia
webdunia

‘ದಿ ವಿಲನ್’ ಚಿತ್ರತಂಡದಲ್ಲಿ ಅಸಮಾಧಾನದ ಹೊಗೆ ಯಾಕೆ ಕಾಣಿಸಿಕೊಂಡಿದೆ ಗೊತ್ತಾ?

‘ದಿ ವಿಲನ್’ ಚಿತ್ರತಂಡದಲ್ಲಿ ಅಸಮಾಧಾನದ ಹೊಗೆ ಯಾಕೆ ಕಾಣಿಸಿಕೊಂಡಿದೆ ಗೊತ್ತಾ?
ಬೆಂಗಳೂರು , ಶನಿವಾರ, 6 ಅಕ್ಟೋಬರ್ 2018 (15:10 IST)
ಬೆಂಗಳೂರು: 'ದಿ ವಿಲನ್' ಸಿನಿಮಾದ ಚಿತ್ರತಂಡದಲ್ಲಿ ಈಗ   ಅಸಮಾಧಾನದ ಹೊಗೆ ಎದ್ದಿದೆಯಂತೆ.ಈ ಅಸಮಾಧಾನಕ್ಕೆ ಕಾರಣ ನಟಿ ಆಮಿ ಜಾಕ್ಸನ್ ಅಂತೆ.


ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ನಟಿ ಆಮಿ ನಡುವೆ ಅಸಮಾಧಾನದ ಹೊಗೆ ಎದ್ದಿದೆಯಂತೆ. 'ದಿ ವಿಲನ್' ಆಮಿ ಜಾಕ್ಸನ್ ನಟನೆಯ ಕನ್ನಡದ ಮೊದಲ ಸಿನಿಮಾವಾಗಿದೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹೀಗಿರುವಾಗ, ಆಮಿ ಜಾಕ್ಸನ್ ಮೇಲೆ ಇದ್ದ ಅಸಮಾಧಾನವನ್ನ ಪ್ರೇಮ್ ಹೊರ ಹಾಕಿದ್ದಾರೆ.


ಅಷ್ಟಕ್ಕೂ ನಟಿ ಆಮಿ ಜಾಕ್ಸನ್ ಮೇಲೆ ಪ್ರೇಮ್ ಸಿಟ್ಟಾಗಿರುವುದು ಚಿತ್ರದ ಪ್ರಮೋಷನ್ ವಿಚಾರವಾಗಿಯಂತೆ. ಇಲ್ಲಿಯತನಕ ಆಮಿ ಭಾಗಿಯಾಗಿರುವುದು ಒಂದೇ ಒಂದು ಕಾರ್ಯಕ್ರಮದಲ್ಲಿಯಂತೆ. ದುಬೈನಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಆಮಿ ಮತ್ತೆ ಇದರ ಕುರಿತು ತಲೆನೇ ಕೆಡಿಸಿಕೊಂಡಿಲ್ಲವಂತೆ. ಹಾಗೇ ಇತ್ತೀಚೆಗೆ ನಡೆದ ಚಿತ್ರದ ರಿಲೀಸಿಂಗ್ ಟೀಸರ್ ಬಿಡುಗಡೆಯಲ್ಲೂ ಆಮಿ ಗೈರಾಗಿದ್ದರು.


ಹೀಗಾಗಿ ಆಮಿ ಜಾಕ್ಸ ನ್ ಮೇಲೆ ಪ್ರೇನ್ ಸಖತ್ ಗರಂ ಆಗಿದ್ದರಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನಾ ವಿರುದ್ಧ ತನುಶ್ರೀ ಆರೋಪಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?