Select Your Language

Notifications

webdunia
webdunia
webdunia
webdunia

ನಾನಾ ವಿರುದ್ಧ ತನುಶ್ರೀ ಆರೋಪಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?

ನಾನಾ ವಿರುದ್ಧ ತನುಶ್ರೀ ಆರೋಪಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?
ಮುಂಬೈ , ಶನಿವಾರ, 6 ಅಕ್ಟೋಬರ್ 2018 (14:57 IST)
ಮುಂಬೈ: ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಹೊರಿಸಿದ್ದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಾಕಷ್ಟು ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.



'ಹಾರ್ನ್ ಓಕೆ ಪ್ಲೀಸ್‌' ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ತನುಶ್ರೀ ಜತೆ  ಅಸಭ್ಯವಾಗಿ ವರ್ತಿಸಿದ್ದಾರೆ  ಎಂದು 10 ವರ್ಷಗಳ ಬಳಿಕ ನಟಿ ಆರೋಪಿಸಿದ್ದಾರೆ.


ಈ ಘಟನೆಯ ಕುರಿತು 'ಹಾರ್ನ್ ಓಕೆ ಪ್ಲೀಸ್‌' ಚಿತ್ರದ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್‌ ಹೇಳಿರುವ ಹೇಳಿಕೆ ಇಲ್ಲಿದೆ ನೋಡಿ


'ಅವತ್ತು ಹಾಡಿನ ಶೂಟ್‌ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಾನಾ ಪಾಟೇಕರ್ ನೋಡಿ ತನುಶ್ರೀ ಅಪ್‌ಸೆಟ್‌ ಆದರು. ಏಕೆ ಗೊತ್ತಾ? ಅವತ್ತು ಅವರು ಮೂಡ್‌ ಸ್ವಿಂಗ್‌ನಲ್ಲಿದ್ದರು. ಸತ್ಯ ಏನು ಗೊತ್ತಾ? ಅಂದು ತನುಶ್ರೀಗೆ ಮುಟ್ಟಿನ ದಿನವಾಗಿತ್ತು' ಎಂದು ಸಮಿ ಸಿದ್ದಿಕ್‌ ಈ ಕುರಿತು ಹೇಳಿಕೆ ನೀಡಿದ್ದಾರೆ.


ಇನ್ನು ಚಿತ್ರದ ಡೈರೆಕ್ಟರ್ ರಾಕೇಶ್‌ ಸಾರಂಗ್‌ ಹೇಳಿದ್ದೇನೆಂದರೆ  ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲು ಹಾಗೂ ಗಮನ ಸೆಳೆಯಲು ತನುಶ್ರೀ ಈ ಆರೋಪ ಹೊರೆಸಿದ್ದಾರೆ, ಆದರೆ ಇದೀಗ ಬಿಗ್‌ಬಾಸ್‌ ಅವಕಾಶ ಕೂಡ ಕೈ ತಪ್ಪಿದೆ ಎಂತಾರೆ ರಾಕೇಶ್‌ ಸಾರಂಗ್‌.


ಆದರೆ ಮುಂಬಯಿ ಪೊಲೀಸ್‌ ತನುಶ್ರೀ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಣಬೀರ್ ಬರ್ತ್ ಡೇ ಗೆ ಆಲಿಯಾ ಭಟ್ ಕೊಟ್ಟ ಸ್ಪೆಷಲ್ ಗಿಪ್ಟ್ ಏನು ಗೊತ್ತಾ?