Publish Date: Fri, 05 Oct 2018 (17:10 IST)
Updated Date: Fri, 05 Oct 2018 (17:13 IST)
ದೈಹಿಕ ಶಿಕ್ಷಣ ಹೇಳಿಕೊಡಬೇಕಿದ್ದ ಶಿಕ್ಷಕ ವಿದ್ಯಾರ್ಥಿನಿಯರ ದೇಹದ ಅಂಗಗಳನ್ನು ಮುಟ್ಟುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಆತನನ್ನು ಪೊಕ್ಸೋ ಕಾಯ್ದೆಯಡಿ ಬಂಧನ ಮಾಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ದೈಹಿಕ ಶಿಕ್ಷಕನ ವಿರುದ್ಧ ಕೇಳಿಬಂದಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ.
ದೈಹಿಕ ಶಿಕ್ಷಕ ಬಸವರಾಜ ರಟಕಲ್ ಬಂಧಿತನಾದವನು. ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.