ತಮಿಳಿನ ವಿಶಾಲ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್

ಭಾನುವಾರ, 28 ಜೂನ್ 2020 (09:32 IST)
ಬೆಂಗಳೂರು: ತಮಿಳು ನಟ ವಿಶಾಲ್ ನಿರ್ಮಿಸಿ, ನಟಿಸುತ್ತಿರುವ ‘ಚಕ್ರ’ ಸಿನಿಮಾದ ಟ್ರೈಲರ್ ನ್ನು ಕನ್ನಡದಲ್ಲಿ ರಾಕಿಂಗ್  ಸ್ಟಾರ್ ಯಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

 

ಚಕ್ರ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಹ್ಯಾಕರ್ ಗಳ ಕುರಿತಾದ ಥ್ರಿಲ್ಲಿಂಗ್ ಕಥಾನಕವಿರುವ ಈ ಸಿನಿಮಾದಲ್ಲಿ ವಿಶಾಲ್ ನಾಯಕರಾಗಿದ್ದು, ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ.

ಈ ಸಿನಿಮಾ ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಯ ಟ್ರೈಲರ್ ನ್ನು ಲಾಂಚ್ ಮಾಡಿರುವ ಯಶ್ ವಿಶಾಲ್ ಮತ್ತು ತಂಡಕ್ಕೆ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅವರ ಕುಟುಂಬ ಕೈಗೊಂಡಿರುವ ತೀರ್ಮಾನವೇನು ಗೊತ್ತಾ?!