ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿಯರ ಸೀಕ್ರೆಟ್ ಒಂದು ಬಯಲಾಗಿದೆ.
ಪ್ರತಿಯೊಬ್ಬರಿಗೂ ಅವರ ಜೀವನದ ಬಾಲ್ಯ, ಶಾಲೆ, ಕಾಲೇಜು ಇರಲಿ ಬಹಳಷ್ಟು ನೆನಪುಗಳಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ.
ಕಳೆದು ಹೋದ ಮಧುರ ನೆನಪುಗಳು ಮತ್ತೆ ನೆನಪಿಸಿಕೊಂಡಾಗ ತುಸು ನಿರಾಳ ಭಾವ ನೀಡುತ್ತದೆ.
ಅಂದ್ಹಾಗೆ, ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ಧಾರೆ ಎನ್ನುವ ಸೀಕ್ರೆಟ್ ನ್ನು ಅವರೇ ಬಹಿರಂಗ ಪಡಿಸಿದ್ದಾರೆ.
ಅನುಷ್ಕಾ ಮತ್ತು ಸಾಕ್ಷಿಇಬ್ಬರೂ ಅಸ್ಸಾಂನ ಒಂದೇ ಶಾಲೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದವರಾಗಿದ್ದಾರೆ.