Daily Horoscope

Select Your Language

Notifications

webdunia
webdunia
webdunia
webdunia

ಧೋನಿಗೆ ಎರಡನೇ ಮಗು? ಜೀವಾ ಧೋನಿ ಮಡಿಲಲ್ಲಿ ಮುದ್ದು ಕಂದ!

ಧೋನಿ
ರಾಂಚಿ: ಧೋನಿ ತಮ್ಮ ವೈಯಕ್ತಿಕ ವಿಚಾರವನ್ನು ಎಲ್ಲೂ ಹೊರಗೆ ಬಿಟ್ಟುಕೊಡಲ್ಲ. ಆದರೆ ಧೋನಿ ಪತ್ನಿ ಸಾಕ್ಷಿ ಸಿಂಗ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿರುವ ಫೋಟೋವೊಂದು ಈಗ ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ.

 

ಸಾಕ್ಷಿ ತಮ್ಮ ಪುತ್ರಿ ಜೀವಾ ನವಜಾತ ಮಗುವೊಂದನ್ನು ಮಲಗಿಸಿಕೊಂಡಿರುವ ಫೋಟೋ ಒಂದನ್ನು ಪ್ರಕಟಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಅಡಿಬರಹ ಕೊಟ್ಟಿಲ್ಲ. ಹೀಗಾಗಿ ಈ ಫೋಟೋ ನೋಡಿ ಧೋನಿ-ಸಾಕ್ಷಿಗೆ ಎರಡನೇ ಮಗುವಾಯ್ತಾ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಕೆಲವರು ಇದು ಧೋನಿ ಗೆಳೆಯ ಹಾರ್ದಿಕ್ ಪಾಂಡ್ಯ ಮಗುವಾಗಿರಬಹುದು ಎಂದು ಊಹಿಸಿದರೆ ಮತ್ತೆ ಕೆಲವರು ಸುರೇಶ್ ರೈನಾ ಮಗುವಿರಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಕೆಲವರು ನಿಮಗೆ ಎರಡನೇ ಮಗುವಾಗಿದ್ದಕ್ಕೆ ಕಂಗ್ರಾಟ್ಸ್ ಎಂದು ಅಭಿನಂದನೆಯನ್ನೂ ಸಲ್ಲಿಸುತ್ತಿದ್ದಾರೆ! ಅಂತೂ ಈ ಒಂದು ಫೋಟೋ ಈಗ ಸೆನ್ಸೇಷನ್ ಸೃಷ್ಟಿಸಿರುವುದು ಸುಳ್ಳಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟರ್ ಪತ್ನಿಗೆ ಅತ್ಯಾಚಾರದ ಬೆದರಿಕೆ