Publish Date: Thu, 06 Aug 2020 (13:25 IST)
Updated Date: Thu, 06 Aug 2020 (13:27 IST)
ದುಬೈ: ಐಪಿಎಲ್ 13 ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಧೋನಿ ಅಭಿಮಾನಿಗಳು ಬಹಳ ದಿನಗಳ ನಂತರ ಅವರನ್ನು ಮೈದಾನದಲ್ಲಿ ನೋಡುವ ಖುಷಿಯಲ್ಲಿದ್ದಾರೆ.
ಮಹಿ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿಯೊಂದನ್ನು ಸಹ ಆಟಗಾರ ಸುರೇಶ್ ರೈನಾ ನೀಡಿದ್ದಾರೆ. ಧೋನಿ ಐಪಿಎಲ್ ಗೆ ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಅವರ ಹೆಲಿಕಾಪ್ಟರ್ ಶಾಟ್ ಗಳನ್ನು ಮತ್ತೆ ನೀವು ನೋಡಬಹುದು ಎಂದು ರೈನಾ ಹೇಳಿದ್ದಾರೆ.
ಲಾಕ್ ಡೌನ್ ಗೂ ಮೊದಲೇ ನಡೆದ ತರಬೇತಿ ಶಿಬಿರದಲ್ಲೇ ಧೋನಿ ಕಠಿಣ ತರಬೇತಿ ನಡೆಸಿದ್ದರು. ಅವರು ಈ ಬಾರಿ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವುದು ಪಕ್ಕಾ ಎಂದು ಸಂದರ್ಶನವೊಂದರಲ್ಲಿ ರೈನಾ ಹೇಳಿಕೊಂಡಿದ್ದಾರೆ.