Publish Date: Sat, 13 Jun 2020 (10:02 IST)
Updated Date: Sat, 13 Jun 2020 (10:03 IST)
ಬೆಂಗಳೂರು: ನಟ ವಿನಾಯಕ ಜೋಶಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಷ್ಟಕ್ಕೂ ವಿನಾಯಕ್ ಜೋಶಿ ಮದುವೆಯಾಗಲಿರುವ ಹುಡುಗಿ ಯಾರು ಗೊತ್ತಾ?
ವಿನಾಯಕ ಜೋಶಿ ಬ್ಯಾಡ್ಮಿಂಟನ್ ಪಟು ವರ್ಷಾ ಬೆಳವಾಡಿ ಅವರನ್ನು ಮದುವೆಯಾಗುತ್ತಿದ್ದಾರೆ. ಏಳನೇ ವಯಸ್ಸಿನಲ್ಲಿ ವರ್ಷಾ ಜತೆಗೆ ವಿನಾಯಕ್ ನೃತ್ಯ ಪ್ರದರ್ಶನ ನೀಡಿದ್ದರಂತೆ. ಅದಾದ 25 ವರ್ಷಗಳ ಬಳಿಕ ವಿನಾಯಕ್ ಮತ್ತು ವರ್ಷಾ ಪರಸ್ಪರ ಭೇಟಿಯಾಗಿದ್ದಾರಂತೆ.
ಇದಾದ ಬಳಿಕ ಇಬ್ಬರ ನಡುವೆ ಸ್ನೇಹ ಗಟ್ಟಿಯಾಗಿದ್ದು, ಈಗ ಮದುವೆಯಾಗಲು ತೀರ್ಮಾನಿಸಿದ್ದಾರೆ. ಸದ್ಯಕ್ಕೆ ವರ್ಷ ತಮ್ಮ ವೃತ್ತಿಜೀವನದಿಂದ ನಿವೃತ್ತಿ ಪಡೆದಿದ್ದಾರೆ. ಸದ್ಯದಲ್ಲೇ ಇಬ್ಬರೂ ಸರಳವಾಗಿ ಮದುವೆಯಾಗಲಿದ್ದಾರೆ.