Select Your Language

Notifications

webdunia
webdunia
webdunia
webdunia

ನೀ ಇಲ್ಲದೇ ಇರಕ್ಕಾಗ್ತಿಲ್ಲ! ಅಣ್ಣ ಚಿರು ಇಲ್ಲದೇ ಹೇಗಿದ್ದಾರೆ ಧ್ರುವ ಸರ್ಜಾ?!

ಚಿರಂಜೀವಿ ಸರ್ಜಾ
ಬೆಂಗಳೂರು , ಶನಿವಾರ, 13 ಜೂನ್ 2020 (09:18 IST)
ಬೆಂಗಳೂರು: ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ರಾಮ-ಲಕ್ಷ್ಮಣರಂತೆ ಇದ್ದವರು. ಆದರೆ ಈಗ ಅಣ್ಣ ಅಕಾಲಿಕವಾಗಿ ಬಿಟ್ಟು ಹೋಗಿರುವುದು ಧ್ರುವ ಸರ್ಜಾಗೆ ಸಹಿಸಲಾಗದಷ್ಟು ನೋವು ತಂದಿದೆ.


ಸಂದರ್ಶನವೊಂದರಲ್ಲಿ ನಿಮ್ಮ ಮೊದಲ ಆಯ್ಕೆ ಪ್ರೇರಣನಾ? ಅಣ್ಣ ಚಿರುವಾ? ಅಂತ ಕೇಳಿದ್ದಕ್ಕೆ ಧ್ರುವ ನನಗೆ ಅಣ್ಣನೇ ಎಂದಿದ್ದರು. ಇದು ಪ್ರೇರಣಾಗೂ ಗೊತ್ತು ಎಂದು ಥಟ್ಟನೆ ಉತ್ತರಿಸಿದ್ದರು.

ಈಗ ಅಂತಹ ಅಣ್ಣನೇ ಇಲ್ಲದಿರುವ ನೋವು ಧ್ರುವರನ್ನು ಕಾಡುತ್ತಿದೆ. ಅಣ್ಣ ತೀರಿಕೊಂಡ ಬಳಿಕ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಧ್ರುವ ಚಿರು ಸರ್ಜಾ ಕೊನೆಯದಾಗಿ ಪೋಸ್ಟ್ ಮಾಡಿದ್ದ ತಮ್ಮ ಹಳೆಯ ಫೋಟೋವನ್ನೇ ಸ್ಟೇಟಸ್ ಗೆ ಹಾಕಿಕೊಂಡಿದ್ದಾರೆ. ಅಲ್ಲದೆ, ಅಣ್ಣ ನೀನಿಲ್ಲದೇ ನಂಗಿಲ್ಲಿ ಇರಕ್ಕಾಗ್ತಿಲ್ಲ. ನಂಗೆ ನೀನು ಬೇಕು’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯೂರಿನ ನೀವೇ ಮದ್ವೆ ಆಗ್ಬೇಕಿತ್ತು: ಸೂಪರ್ ಸ್ಟಾರ್ ಜೆಕೆ ಮೇಲೆ ಅಭಿಮಾನಿಗಳ ಬೇಸರ!