Select Your Language

Notifications

webdunia
webdunia
webdunia
webdunia

ಮಯೂರಿನ ನೀವೇ ಮದ್ವೆ ಆಗ್ಬೇಕಿತ್ತು: ಸೂಪರ್ ಸ್ಟಾರ್ ಜೆಕೆ ಮೇಲೆ ಅಭಿಮಾನಿಗಳ ಬೇಸರ!

ಮಯೂರಿನ ನೀವೇ ಮದ್ವೆ ಆಗ್ಬೇಕಿತ್ತು: ಸೂಪರ್ ಸ್ಟಾರ್ ಜೆಕೆ ಮೇಲೆ ಅಭಿಮಾನಿಗಳ ಬೇಸರ!
ಬೆಂಗಳೂರು , ಶನಿವಾರ, 13 ಜೂನ್ 2020 (09:16 IST)
ಬೆಂಗಳೂರು: ನಟಿ ಮಯೂರಿ ಕ್ಯಾತಿ ಮದುವೆಯಾದ ವಿಚಾರವನ್ನು ನಟ ಜೆಕೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೇ ತಡ. ಅವರಿಗೆ ಅಭಿಮಾನಿಗಳು ನೀವೇ ಅವರನ್ನು ಮದುವೆ ಆಗಬೇಕಿತ್ತು ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.


ಜೆಕೆ-ಅಶ್ವಿನಿ (ಮಯೂರಿ) ಜೋಡಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಈ ಧಾರವಾಹಿಯಲ್ಲಿ ಜೆಕೆ ತನ್ನ ಪತ್ನಿಯನ್ನು ಅಂದರೆ ಅಶ್ವಿನಿ ಪಾತ್ರಧಾರಿ ಮಯೂರಿಯನ್ನು ‘ಹೆಂಡ್ತಿ’ ಎಂದು ಕರೆಯುತ್ತಿದ್ದುದು ಜನಪ್ರಿಯವಾಗಿತ್ತು.

ಧಾರವಾಹಿಯ ಹೊರತಾಗಿಯೂ ಇಬ್ಬರೂ ಒಳ್ಳೆ ಜೋಡಿ ಮದುವೆಯಾಗಿ ಎಂದೆಲ್ಲಾ ಅಭಿಮಾನಿಗಳು ಹೇಳುತ್ತಲೇ ಇದ್ದರು. ಆದರೆ ಅವರಿಬ್ಬರ ನಡುವೆ ಗೆಳೆತನದ ಹೊರತಾಗಿ ಬೇರೇನೂ ಇರಲಿಲ್ಲ. ಈಗ ಮಯೂರಿ ಮದುವೆಯಲ್ಲೂ ಜೆಕೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆದರೆ ಜೆಕೆ ಇನ್ ಸ್ಟಾಗ್ರಾಂನಲ್ಲಿ ಮಯೂರಿಗೆ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳು ಮಯೂರಿ ನಿಮಗೆ ಹೆಚ್ಚು ಸೂಟ್ ಆಗ್ತಿದ್ದರು. ಅವರನ್ನು ನೀವೇ ಮದುವೆಯಾಗಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಹೆಂಡ್ತಿ’ ಮದುವೆ ಆಯ್ತು, ನಿಮ್ಮ ಮದುವೆ ಯಾವಾಗ? ನೀವು ಯಾವಾಗ ಮದುವೆ ಸುದ್ದಿ ಕೊಡ್ತೀರಿ ಜೆಕೆ ಎಂದು ಹಲವರು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿಯಲ್ಲಿ ಈಗ ‘ಮಹಾಭಾರತ’, ‘ರಾಮಾಯಣ’ ಧಾರವಾಹಿಗಳದ್ದೇ ಕಾರುಬಾರು