Publish Date: Fri, 12 Jun 2020 (11:11 IST)
Updated Date: Fri, 12 Jun 2020 (11:13 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಚಿರಪರಿಚಿತರಾದ ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಅರುಣ್ ಜತೆ ಮಯೂರಿ ಮದುವೆ ನೆರವೇರಿದೆ.
ಇದುವರೆಗೆ ತಮ್ಮ ಮದುವೆ ಬಗ್ಗೆ ಎಲ್ಲೂ ತುಟಿಬಿಚ್ಚಿರದ ಮಯೂರಿ ಇಂದು ದಿಡೀರ್ ಆಗಿ ಮದುವೆಯಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಈ ಮದುವೆಯಲ್ಲಿ ಕೇವಲ ಆಪ್ತರು, ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಅಶ್ವಿನಿ ನಕ್ಷತ್ರದಲ್ಲಿ ಮಯೂರಿಗೆ ಜೋಡಿಯಾಗಿದ್ದ ನಟ ಜೆಕೆ ತಮ್ಮ ಕುಟುಂಬ ಸಮೇತ ಹಾಜರಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.