Select Your Language

Notifications

webdunia
webdunia
webdunia
webdunia

ನಮ್ಮ ಮನೆಗೆ ಮತ್ತೊಬ್ಬ ಮಗು ಬಂತು ಎಂದ ವಿಜಯ್ ಸೂರ್ಯ: ಅಭಿಮಾನಿಗಳಿಗೆ ಕನ್ ಫ್ಯೂಷನ್!

ನಮ್ಮ ಮನೆಗೆ ಮತ್ತೊಬ್ಬ ಮಗು ಬಂತು ಎಂದ ವಿಜಯ್ ಸೂರ್ಯ: ಅಭಿಮಾನಿಗಳಿಗೆ ಕನ್ ಫ್ಯೂಷನ್!
ಬೆಂಗಳೂರು , ಶನಿವಾರ, 13 ಜೂನ್ 2020 (09:29 IST)
ಬೆಂಗಳೂರು: ಡಿಂಪಲ್ ಕೆನ್ನೆಯ ನಟ ವಿಜಯ್ ಸೂರ್ಯ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮುದ್ದಾದ ಹೆಣ್ಣು ಮಗುವಿನ ಫೋಟೋ ಪ್ರಕಟಿಸಿ ನಮ್ಮ ಮನೆಗೆ ಬಂದ ಮಹಾಲಕ್ಷ್ಮಿ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಫುಲ್ ಕನ್ ಫ್ಯೂಷನ್ ಆಗಿದ್ದಾರೆ.


ಕಳೆದ ಜನವರಿಯಲ್ಲಿ ವಿಜಯ್ ಸೂರ್ಯ ದಂಪತಿಗೆ ಗಂಡು ಮಗುವಾಗಿತ್ತು. ಆದರೆ ಇಷ್ಟು ಬೇಗ ಮತ್ತೊಂದು ಹೆಣ್ಣು ಮಗು ಹೇಗೆ ಸಾಧ‍್ಯ? ಎಂಬುದು ಎಲ್ಲರ ಪ್ರಶ್ನೆ. ಇದಕ್ಕೆ ಸ್ವಲ್ಪ ಕ್ಲಾರಿಟಿ ಕೊಡಿ ಎಂದು ವಿಜಯ್ ಸೂರ್ಯಗೆ ಕೇಳಿಕೊಂಡಿದ್ದಾರೆ.

ಅಸಲಿಗೆ ಈ ಹೆಣ್ಣು ಮಗುವಾಗಿರುವುದು ವಿಜಯ್ ಸೂರ್ಯ ಅವರಿಗಲ್ಲ. ಅವರ ಅಣ್ಣ ರವಿ ಸೂರ್ಯ ಅವರಿಗೆ. ಈ ಮಗುವಿಗೆ ಅನನ್ಯ ಸೂರ್ಯ ಎಂದು ನಾಮಕರಣ ಮಾಡಲಾಗಿದೆ ಎಂದು ಪ್ರಕಟಿಸಿರುವ ವಿಜಯ್ ಇದು ಯಾರ ಮಗು ಎಂದು ನೇರವಾಗಿ ಹೇಳದೇ ಇರುವುದರಿಂದ ಇಷ್ಟೆಲ್ಲಾ ಕನ್ ಫ್ಯೂಷನ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನೀ ಇಲ್ಲದೇ ಇರಕ್ಕಾಗ್ತಿಲ್ಲ! ಅಣ್ಣ ಚಿರು ಇಲ್ಲದೇ ಹೇಗಿದ್ದಾರೆ ಧ್ರುವ ಸರ್ಜಾ?!