Select Your Language

Notifications

webdunia
webdunia
webdunia
webdunia

ಯುವ ವಿಚ್ಛೇದನ ಸುದ್ದಿ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿನಯ್ ರಾಜಕುಮಾರ್

Vinay Rajkumar

Krishnaveni K

ಬೆಂಗಳೂರು , ಶುಕ್ರವಾರ, 5 ಜುಲೈ 2024 (14:23 IST)
ಬೆಂಗಳೂರು: ಯುವರಾಜ್ ಕುಮಾರ್ ವಿಚ್ಛೇದನದ ಸುದ್ದಿಯ ನಡುವೆ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಮದುವೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವರಾಜ್ ಕುಮಾರ್ ಮತ್ತು ಶ್ರೀದೇವಿ ವಿಚ್ಛೇದನ ಸುದ್ದಿ ಡಾ ರಾಜ್ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತ ನೀಡಿತ್ತು. ಇದರ ನಡುವೆಯೇ ರಾಘವೇಂದ್ರ ರಾಜ್ ಕುಮಾರ್ ಇನ್ನೊಬ್ಬ ಪುತ್ರ ವಿನಯ್ ರಾಜ್ ಕುಮಾರ್ ಮದುವೆಯ ಫೋಟೋವೊಂದು ವೈರಲ್ ಆಗಿದೆ.

ಆದರೆ ಇದು ನಿಜವಾಗಿಯೂ ನಡೆದ ಮದುವೆಯೇ ಅಥವಾ ಶೂಟಿಂಗ್ ನಿಮಿತ್ತ ನಡೆದ ಮದುವೆಯ ಚಿತ್ರವೇ ಎಂಬುದು ಖಚಿತವಾಗಿಲ್ಲ. ಇದು ಶೂಟಿಂಗ್ ಸಮಯದಲ್ಲಿ ತೆಗೆದ ಚಿತ್ರ ಎಂದೇ ಹೇಳಲಾಗಿದೆ. ಡಾ ರಾಜ್ ಕುಟುಂಬ ಈ ರೀತಿ ಯಾರಿಗೂ ಹೇಳದೇ ಮನೆ ಮಗನ ಮದುವೆ ಮಾಡಿ ಮುಗಿಸಿತೇ ಎಂದು ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ.

ಮತ್ತೆ ಕೆಲವರು ಜೋಡಿ ಚೆನ್ನಾಗಿದೆ ಎಂದು ಶುಭಾಶಯ ಕೋರಿದ್ದಾರೆ. ವಿನಯ್ ರಾಜ್ ಕುಮಾರ್ ಈಗ ಗ್ರಾಮಾಯಣ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥ್ರಿಲ್ಲರ್‌ ಸಿನಿಮಾ ಕರೀನಾ ಕಪೂರ್‌: ಸೆಪ್ಟೆಂಬರ್‌ನಲ್ಲಿ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ತೆರೆಗೆ