Select Your Language

Notifications

webdunia
webdunia
webdunia
webdunia

ಥ್ರಿಲ್ಲರ್‌ ಸಿನಿಮಾ ಕರೀನಾ ಕಪೂರ್‌: ಸೆಪ್ಟೆಂಬರ್‌ನಲ್ಲಿ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ತೆರೆಗೆ

Kareena Kapoor

Sampriya

ಮುಂಬೈ , ಗುರುವಾರ, 4 ಜುಲೈ 2024 (21:34 IST)
Photo Courtesy X
ಮುಂಬೈ: ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿಸಿ ಥ್ರಿಲ್ಲರ್ ಸಿನಿಮಾ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಬಿಡುಗಡೆಯಾಗಲಿದೆ

ಸೆಪ್ಟೆಂಬರ್ 13ರಂದು ಚಿತ್ರಮಂದಿರಗಳಲ್ಲಿ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ಕರೀನಾ ಜೊತೆ ಆಶಾ ಟಂಡನ್, ರಣವೀರ್ ಬ್ರಾರ್, ಕೇತ್ ಅಲೇನ್ ಜೊತೆಯಾಗಿದ್ದಾರೆ.

ಈ ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದು ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದಾರೆ. ಏಕ್ತಾ ಕಪೂರ್ ಅವರು ಬಿಡುಗಡೆ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರೀನಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಕ್ರೇವ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಕಂಡಿತ್ತು. ಸದ್ಯ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿಯಂತಹ ಗಂಡ ಇದ್ದೂ ಏನು ಪ್ರಯೋಜನ ಎಂದ ಬಿಗ್ ಬಾಸ್ ತನಿಷಾ ಕುಪ್ಪಂಡ