Select Your Language

Notifications

webdunia
webdunia
webdunia
webdunia

ಕರೀನಾ ಹೆಸರಿನ ಟ್ಯಾಟೂ ಮಾಯ, ಮೂರನೇ ಮದುವೆಗೆ ರೆಡಿಯಾದ್ರಾ ಸೈಫ್

Sai Ali Khan

Sampriya

ಮುಂಬೈ , ಬುಧವಾರ, 15 ಮೇ 2024 (19:51 IST)
Photo Courtesy X
ಮುಂಬೈ:  ನಟ ಸೈಫ್ ಅಲಿ ಖಾನ್ ತಮ್ಮ ಕೈಯಲ್ಲಿದ್ದ ಕರೀನಾ ಹೆಸರಿನ ಟ್ಯಾಟೂ ಜಾಗದಲ್ಲಿ ತ್ರಿಶೂಲದ ಚಿಹ್ನೆಯ ಟ್ಯಾಟೂ ಬಂದಿರುವ ಬಗ್ಗೆ ಬಿಟೌನ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಹಚ್ಚೆ ಮಾಯವಾಗಿರುವ ಬಗ್ಗೆ ನೆಟ್ಟಿಗರು ಸ್ಟಾರ್ ದಂಪತಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ. ಸೈಫ್ ಮೂರನೇ  ಮದುವೆಗೆ ರೆಡಿಯಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.

ಡೇಟಿಂಗ್‌ನ ಆರಂಭಿಕ ದಿನಗಳಲ್ಲಿ ಕರೀನಾ ಅವರ ಹೆಸರನ್ನು ಎಡ ಮುಂದೋಳಿನ ಮೇಲೆ ಸೈಫ್ ಅಲಿ ಖಾನ್ ಅವರು ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಅದೇ ಜಾಗದಲ್ಲಿ ತ್ರಿಶೂಲದ ಚಿಹ್ನೆಯಿಂದ ಮುಚ್ಚಿದ್ದಾರೆ. ಈ ಬದಲಾವಣೆ ಅನೇಕ ಊಹಾಪೋಹ ಹುಟ್ಟು ಹಾಕಿಸಿದೆ.

2007 ರಿಂದ ಡೇಟಿಂಗ್ ನಡೆಸಿದ್ದ ಈ ಜೋಡಿ 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಈ ಸ್ಟಾರ್ ಜೋಡಿಯು ತಮ್ಮ ಸಂಬಂಧ ಮತ್ತು ಕೌಟುಂಬಿಕ ಜೀವನಕ್ಕಾಗಿ ಯಾವಾಗಲೂ ಗಮನಸೆಳೆದಿದ್ದಾರೆ. ಸೈಫ್ ಅವರ ಹಚ್ಚೆ, ಕರೀನಾಗೆ ಅವರ ಸಮರ್ಪಣೆಯ ಗೋಚರ ಸಂಕೇತವಾಗಿತ್ತು. ಇದೀಗ ಸೈಫ್ ಕೈಯಿಂದ ಹಚ್ಚೆ ಮಾಯೆ ಆಗಿರುವ ಬಗ್ಗೆ ನೆಟಿಜನ್‌ಗಳಲ್ಲಿ ವ್ಯಾಪಕ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿವೆ.

ಈಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸೈಫ್ ಕೈಯಲ್ಲಿ ಹಚ್ಚೆ ಮಾಯವಾಗಿರುವ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ ಜೊತೆ ಲೈವ್ ಬಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ