Select Your Language

Notifications

webdunia
webdunia
webdunia
webdunia

ಟಾಕ್ಸಿಕ್ ಸಿನಿಮಾದಲ್ಲಿ ಕರೀನಾ ಕಪೂರ್ ಬದಲಿಗೆ ಈ ಸೌತ್ ಸೂಪರ್ ಸ್ಟಾರ್ ನಟಿ

Toxic

Krishnaveni K

ಬೆಂಗಳೂರು , ಶನಿವಾರ, 4 ಮೇ 2024 (12:52 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದಲ್ಲಿ ಕರೀನಾ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತುಗಳಿತ್ತು. ಆದರೆ ಅದೀಗ ಸುಳ್ಳಾಗುತ್ತಿದೆ.

ಕರೀನಾ ಬದಲಿಗೆ ಮತ್ತೊಬ್ಬ ಸೌತ್ ಸೂಪರ್ ಸ್ಟಾರ್ ನಟಿಯನ್ನು ಆ ಸ್ಥಾನಕ್ಕೆ ಕರೆತರಲು ಚಿತ್ರತಂಡ ಪ್ರಯತ್ನ ನಡೆಸಿದೆ. ಸೌತ್ ಸೂಪರ್ ಸ್ಟಾರ್ ನಯನತಾರಾ ಅವರನ್ನು ಕರೀನಾ ಬದಲಿಗೆ ಚಿತ್ರತಂಡಕ್ಕೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆಯಂತೆ. ಇದಕ್ಕೆ ನಯನಾ ಗ್ರೀನ್ ಸಿಗ್ನಲ್ ನೀಡುತ್ತಾರಾ ಕಾದು ನೋಡಬೇಕು.

ಆದರೆ ಇದಕ್ಕೆ ಮೊದಲೇ ನೆಟ್ಟಿಗರು ಮಾತ್ರ ನಯನತಾರಾ ಆದರೆ ನಮಗೆ ಡಬಲ್ ಓಕೆ ಎನ್ನುತ್ತಿದ್ದಾರೆ. ಮದುವೆ ಬಳಿಕ ನಯನತಾರಾ ತಮ್ಮ ಪಾತ್ರಗಳ ವಿಚಾರದಲ್ಲಿ ಚ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಜೊತೆ ಹಿಂದಿಯಲ್ಲಿ ಜವಾನ್ ಸಿನಿಮಾ ಮಾಡಿದ್ದರು.

ಇದೀಗ ಟಾಕ್ಸಿಕ್ ನಲ್ಲಿ ನಯನತಾರಾ ಬರುವ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಮೊದಲು ಕರೀನಾ ಕಪೂರ್ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಸಹೋದರಿಯ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಅದೀಗ ಸುಳ್ಳಾಗಿದೆ. ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ಮೂಲದ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದಾರೆ. ಇದೀಗ ಮಲಯಾಳಂ ಮೂಲದ ನಯನತಾರಾರನ್ನೇ ಗೀತು ಕರೆತರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ನಿರೂಪಕಿ ಭಾರತಿ ಸಿಂಗ್, ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದೆಂದು ಕಣ್ಣೀರು