Select Your Language

ವಿಕ್ರಾಂತ್ ರೋಣ ಪ್ರೆಸ್ ಮೀಟ್ ವೇದಿಕೆ ಮೇಲೆ ತಾರೆಯರನ್ನು ಕುಣಿಸಿದ್ರು ಜಾಕ್ವೆಲಿನ್ ಫರ್ನಾಂಡಿಸ್

webdunia
ಬೆಂಗಳೂರು , ಬುಧವಾರ, 22 ಜೂನ್ 2022 (16:32 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಟ್ರೈಲರ್ ಲಾಂಚ್ ಪ್ರೆಸ್ ಮೀಟ್ ಇಂದು ನಡೆದಿದ್ದು, ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು ಆಗಮಿಸಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್ ಸೇರಿದಂತೆ ಅನೇಕ ತಾರೆಯರು ಆಗಮಿಸಿದ್ದರು. ಜೊತೆಗೆ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಕೂಡಾ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ನನ್ನ ಮಗ ಎಂದರೆ, ರಕ್ಷಿತ್ ಶೆಟ್ಟಿ ಸುದೀಪ್ ಸರ್ ನನಗೆ ಸ್ಪೂರ್ತಿ ಎಂದರು. ಕಾರ್ಯಕ್ರಮದ ವೇದಿಕೆಗೆ ಜಾಕ್ವೆಲಿನ್ ಬಂದಾಗ ಅಲ್ಲಿ ಸೇರಿದ್ದ ಎಲ್ಲಾ ತಾರೆಯರು ರಾ ರಾ ರಕ್ಕಮ್ಮ ಹಾಡಿಗೆ ಸ್ಟೆಪ್ ಹಾಕಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ದಿಗಂತ್ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡಿದ ಪತ್ನಿ ಐಂದ್ರಿತಾ