ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರದ್ದು ಇಂದು ಬರ್ತಡೇ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ವಿಜಯಲಕ್ಷ್ಮಿ ಅವರು ಕೈಯಲ್ಲಿ ದೇವಸ್ಥಾನದ ಪ್ರಸಾದದ ಫೋಟೋವನ್ನು ಹಿಡಿದುಕೊಂಡಿರುವುದನ್ನು ಶೇರ್ ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವವ ಪತಿ ದರ್ಶನ್‌ರನ್ನು ಬಿಡುಗಡೆ ಮಾಡಲು ಭಾರೀ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೇವರ ಮೊರೆ ಜತೆಗೆ ಕಾನೂನಿನ ಹೋರಾಟವನ್ನು ನಡೆಸುತ್ತಿರುವ ವಿಜಯಲಕ್ಷ್ಮೀ, ವಾರಕ್ಕೊಂದು ಬಾರೀ ಜೈಲಿನಲ್ಲಿರುವ ಪತಿಯನ್ನು ನೋಡಲು ಹೋಗುತ್ತಾರೆ. ಅವರಿಗೆ ಧೈರ್ಯ ತುಂಬುತ್ತಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ವಿಜಯಲಕ್ಷ್ಮಿ ಆಗಾಗ ಪ್ರಕೃತಿ ಹಾಗೂ ತಾವು ಭೇಟಿ ನೀಡುವ ಸ್ಥಳಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಮಗನ ಜತೆಯಷ್ಟೇ ಕೇಕ್ ಕಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನೂ ದರ್ಶನ್ ಆಪ್ತ ನಟ, ಧನ್ವೀರ್ ಅವರು ಅಕ್ಕನ ಸ್ಥಾನದಲ್ಲಿರುವ ವಿಜಯಲಕ್ಷ್ಮಿಗೆ ಹ್ಯಾಪಿ ಬರ್ತಡೇ ಅಕ್ಕಾ ಎಂದು ದರ್ಶನ್ ಜತೆಗೆ ವಿಜಯಲಕ್ಷ್ಮಿ ನಿಂತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ವಿಶ್ ಮಾಡಿದ್ದಾರೆ.