ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮಾತಿಗೆ ಒಂದು ತೂಕವಿರುತ್ತದೆ. ಅವರ ಮಾತು ಎಲ್ಲಾ ಸ್ಪರ್ಧಿಗಳೂ ಕೇಳುತ್ತಾರೆ. ಆದರೆ ಈಗ ಕಿಚ್ಚ ಸುದೀಪ್ ಬಗ್ಗೆಯೇ ಸ್ಪರ್ಧಿ ಧ್ರುವಂತ್ ಗಂಭೀರ ಆರೋಪ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ಮೇಲೆ ಧ್ರುವಂತ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಆ ಸಿಟ್ಟನ್ನು ಸಹ ಸ್ಪರ್ಧಿಯ ಜೊತೆ ಹಂಚಿಕೊಳ್ಳುವಾಗ ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪವನ್ನು ಧ್ರುವಂತ್ ಮಾಡಿದ್ದಾರೆ. ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ರಕ್ಷಿತಾ ಮಾತಿನ ಶೈಲಿ ಧ್ರುವಂತ್ ಗೆ ಇಷ್ಟವಾಗುತ್ತಿಲ್ಲ. ಆದರೆ ಇದನ್ನು ಕಿಚ್ಚ ಸುದೀಪ್ ತಳ್ಳಿ ಹಾಕಿದ್ದಾರೆ. ನಮಗೆ ರಕ್ಷಿತಾ ಭಾಷೆ ಯಾವುದೇ ಸಮಸ್ಯೆಯಲ್ಲ ಎಂದಿದ್ದರು. ಇದೇ ಕಾರಣಕ್ಕೆ ಧ್ರುವಂತ್ ಕಿಚ್ಚನ ಮೇಲೆ ಆರೋಪ ಮಾಡಿದ್ದಾರೆ.
ರಕ್ಷಿತಾ ವಿಷಯಕ್ಕೆ ಬಂದಾಗ ನನಗೆ ಮಾತನಾಡಲು ಸ್ಪೇಸ್ ಕೊಡುವವರೆಗೂ ಮಾತನಾಡಲ್ಲ. ಸುದೀಪ್ ಅವರು ನನಗೆ ಮಾತನಾಡಲು ಸ್ಪೇಸ್ ಕೊಡಲ್ಲ. ನಾನು ಮಾತಾಡ್ತೀನಿ ಅಂತ ಕೊಡಲ್ಲ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರೂ ಗರಂ ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ವಾರಂತ್ಯಕ್ಕೆ ಕಿಚ್ಚನ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕಿದೆ.