ಚೆನ್ನೈ: ಇತ್ತೀಚೆಗೆ ಹೆಚ್ಚಿನ ಸ್ಟಾರ್ ನಟರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.
ಆದರೆ ದಳಪತಿ ವಿಜಯ್ ಮಾತ್ರ ಯಾಕೋ ಇನ್ನೂ ಅಧಿಕೃತವಾಗಿ ಇನ್ ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿಲ್ಲ. ಇದೀಗ ವಿಜಯ್ ಇನ್ ಸ್ಟಾಗ್ರಾಂ ಪುಟ ತೆರೆಯಲು ಮನಸ್ಸು ಮಾಡಿದ್ದಾರಂತೆ.
ಸದ್ಯದಲ್ಲೇ ವಿಜಯ್ ಇನ್ ಸ್ಟಾಗ್ರಾಂ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ವಿಜಯ್ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಸಾಕಷ್ಟು ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಇನ್ ಸ್ಟಾಗ್ರಾಂಗೂ ಅಡಿಯಿಡಲಿದ್ದಾರೆ ಎಂಬ ಸುದ್ದಿಯಿದೆ.