Publish Date: Sat, 09 Jul 2022 (10:10 IST)
Updated Date: Sat, 09 Jul 2022 (10:11 IST)
ಬೆಂಗಳೂರು: ಸ್ಯಾಂಡಲ್ ವುಡ್ ಚಕ್ರವರ್ತಿ ಶಿವರಾಜ್ ಕುಮಾರ್ 60 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಜುಲೈ 12 ರಂದು ಅವರ ಜನ್ಮದಿನವಿದೆ.
ಈ ಬಾರಿ 60 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದರಿಂದ ಜೀ ಕನ್ನಡ ವಾಹಿನಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ತಯಾರಿ ನಡೆಸಿದೆ. ಅವರ ಹುಟ್ಟುಹಬ್ಬದ ನಿಮಿತ್ತ 60 ಗಂಟೆಗಳ ಕಾಲ ನಿರಂತರವಾಗಿ ಅವರ ಸಿನಿಮಾಗಳನ್ನು ಜೀ ಪಿಕ್ಚರ್ಸ್ ಪ್ರಚಾರ ಮಾಡಲಿದೆ.
ಇನ್ನು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಶಿವಣ್ಣನಿಗೆ ವಿಶೇಷ ಡೆಡಿಕೇಷನ್ ರೌಂಡ್ ಇರಲಿದೆ. ಈ ಬಾರಿ ರಾಘವೇಂದ್ರ ರಾಜ್ ಕುಮಾರ್ ಕೂಡಾ ವೇದಿಕೆ ಆಗಮಿಸುತ್ತಿರುವುದು ವಿಶೇಷ.