Publish Date: Fri, 08 Apr 2022 (09:06 IST)
Updated Date: Fri, 08 Apr 2022 (09:06 IST)
ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ದಳಪತಿ ವಿಜಯ್ ತಮ್ಮ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಇಟ್ಟುಕೊಂಡು ಟ್ರೋಲ್ ಮಾಡುವವರಿಗೆ ಈಗ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನನ್ನ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಇಟ್ಟುಕೊಂಡವರು ಯಾರೂ ರಾಜಕಾರಣಿಗಳು, ಅಧಿಕಾರಿಗಳನ್ನು ಬಳಸಿಕೊಂಡು ಟ್ರೋಲ್ ಮಾಡಬಾರದು. ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿಜಯ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನೇನು ಬೀಸ್ಟ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಹೀಗಾಗಿ ಟ್ರೋಲ್ ಪೇಜ್ ಗಳು ವಿಜಯ್ ಹೆಸರಿನಲ್ಲಿ ಟ್ರೋಲ್ ಮಾಡುವುದು ಕಾಮನ್. ಆದರೆ ಇದಕ್ಕೆಲ್ಲಾ ವಿಜಯ್ ಬ್ರೇಕ್ ಹಾಕಲು ಮುಂದಾಗಿದ್ದಾರೆ.