Publish Date: Thu, 07 Apr 2022 (16:34 IST)
Updated Date: Thu, 07 Apr 2022 (16:36 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟಿಕೆಟ್ ಗಳು ಇಂದಿನಿಂದ ಆನ್ ಲೈನ್ ನಲ್ಲಿ ಲಭ‍್ಯವಿದ್ದು, ಈಗಾಗಲೇ ಬಹುತೇಕ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಕರ್ನಾಟಕ ಹೊರತುಪಡಿಸಿ ಕೇರಳ, ದೆಹಲಿ, ಕೋಲ್ಕೊತ್ತಾ,ತಮಿಳುನಾಡು, ಗಲ್ಫ್ ರಾಷ್ಟ್ರ, ಬ್ರಿಟನ್, ಅಮೆರಿಕಾದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಟಿಕೆಟ್ ಮಾರಾಟವಾಗಿದೆ.
ಕರ್ನಾಟಕದಲ್ಲೂ ಬುಕಿಂಗ್ ಓಪನ್ ಆಗುವುದನ್ನೇ ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 13 ರಂದು ಬಿಡುಗಡೆಯಾಗಲಿರುವ ವಿಜಯ್ ಅಭಿನಯದ ಬೀಸ್ಟ್ ಗೆ ಹೋಲಿಸಿದರೆ ಕೆಜಿಎಫ್ 2 ಟಿಕೆಟ್ ಮಾರಾಟ ದುಪ್ಪಟ್ಟಾಗಿದೆ.