Select Your Language

Notifications

webdunia
webdunia
webdunia
webdunia

ಪುನೀತ್ ಬ್ಯಾನರ್ ನ ಹೊಸ ಸಿನಿಮಾ ಘೋಷಣೆ

ಪುನೀತ್ ಬ್ಯಾನರ್ ನ ಹೊಸ ಸಿನಿಮಾ ಘೋಷಣೆ
ಬೆಂಗಳೂರು , ಗುರುವಾರ, 7 ಏಪ್ರಿಲ್ 2022 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದರೂ ಅವರ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ಸ್ ಕೆಸಲ ನಿಲ್ಲಲ್ಲ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಈಗಾಗಲೇ ಹೇಳಿದ್ದರು. ಅದರಂತೆ ಈಗ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.

ಪುನೀತ್ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ‘ಆಚಾರ್ ಆಂಡ್ ಕೋ’ ಎಂಬ ಟೈಟಲ್ ನ ಹೊಸ ಸಿನಿಮಾ ಘೋಷಣೆಯಾಗಿದೆ. ಇದು ಪಿಆರ್ ಕೆ ಪ್ರೊಡಕ್ಷನ್ಸ್ ನ 10 ನೇ ಸಿನಿಮಾವಾಗಿದೆ.

ವಿಶೇಷವೆಂದರೆ ಈ ಸಿನಿಮಾಗೆ ಮಹಿಳಾ ನಿರ್ದೇಶಕಿಗೆ ಅವಕಾಶ ಕೊಡಲಾಗಿದೆ. ಸಿಂಧು ಶ್ರೀನಿವಾಸ್ ಎಂಬ ಹೊಸ ಪ್ರತಿಭೆ ಸಿನಿಮಾದ ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದಾರೆ. ಇದುವರೆಗೂ ಪಿಆರ್ ಕೆ ಪ್ರೊಡಕ್ಷನ್ ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರಂತೆ ಈ ಬಾರಿಯೂ ಹೊಸಬರ ತಂಡಕ್ಕೆ ಸಾಥ್ ಕೊಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ರಾಕಿ ಭಾಯ್ ಗೆ ಭರ್ಜರಿ ಸ್ವಾಗತ