ಮುಂಬೈ: ಕೆಜಿಎಫ್ 2 ಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇಂದು ನವಿ ಮುಂಬೈನಲ್ಲಿ ಮಾಲ್ ಒಂದರಲ್ಲಿ ಪ್ರಚಾರ ನಡೆಸಿದ್ದಾರೆ.
ಈ ವೇಳೆ ರಾಕಿ ಭಾಯ್ ನ ನೋಡಲು ಜನ ಪ್ರವಾಹವೇ ನೆರೆದಿತ್ತು. ರಾಕಿಂಗ್ ಸ್ಟಾರ್ ಯಶ್ ವೇದಿಕೆಯೇರುತ್ತಿದ್ದಂತೇ ಅಲ್ಲಿ ಸೇರಿದ್ದ ಅಭಿಮಾನಿಗಳು ರಾಕಿ ಭಾಯ್ ಎಂಧು ಕೂಗಿ ತಮ್ಮ ಖುಷಿ ವ್ಯಕ್ತಪಡಿಸಿದರು.
ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ತೆರೆ ಕಾಣಲಿರುವ ಕೆಜಿಎಫ್ 2 ಚಿತ್ರದ ಬಗ್ಗೆ ಮುಂಬೈನಲ್ಲೂ ಭಾರೀ ನಿರೀಕ್ಷೆಯಿದೆ. ಇಂದು ಚಿತ್ರದ ಎರಡನೇ ಹಾಡೂ ಬಿಡುಗಡೆಯಾಗಿದೆ. ನಾಳೆಯಿಂದ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಲಿದೆ.