Select Your Language

Notifications

webdunia
webdunia
webdunia
webdunia

ಆರ್ ಆರ್ ಆರ್, ಕಾಶ್ಮೀರ್ ಫೈಲ್ಸ್ ಯಾವ್ದೂ ನೋಡಿಲ್ಲ, ಕೆಜಿಎಫ್ ಮಾತ್ರ ನೋಡ್ತೀನಿ ಎಂದ್ರು ಯಶ್

ಆರ್ ಆರ್ ಆರ್, ಕಾಶ್ಮೀರ್ ಫೈಲ್ಸ್ ಯಾವ್ದೂ ನೋಡಿಲ್ಲ, ಕೆಜಿಎಫ್ ಮಾತ್ರ ನೋಡ್ತೀನಿ ಎಂದ್ರು ಯಶ್
ಮುಂಬೈ , ಮಂಗಳವಾರ, 5 ಏಪ್ರಿಲ್ 2022 (17:40 IST)
ಮುಂಬೈ: ಕೆಜಿಎಫ್ 2 ಸಿನಿಮಾ ಪ್ರಚಾರಾರ್ಥ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಕಿಂಗ್ ಸ್ಟಾರ್ ಯಶ್ ಬೇರೆ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಆರ್ ಆರ್ ಆರ್, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿವೆ. ಹೀಗಾಗಿ ಈ ಎರಡು ಸಿನಿಮಾಗಳನ್ನು ನೋಡಿದ್ದೀರಾ ಎಂದು ಯಶ್ ಗೆ ಸಂದರ್ಶಕರು ಕೇಳಿದ್ದಾರೆ.

ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಯಶ್ ‘ಆರ್ ಆರ್ ಆರ್, ದಿ ಕಾಶ್ಮೀರ್ ಫೈಲ್ಸ್ ಯಾವ ಸಿನಿಮಾವನ್ನೂ ನೋಡಿಲ್ಲ. ಸದ್ಯಕ್ಕೆ ಕೆಜಿಎಫ್ ಮಾತ್ರ ನೋಡ್ತೀನಿ’ ಎಂದಿದ್ದಾರೆ. ಇನ್ನು, ತಮ್ಮ ಸಿನಿ ಜೀವನದ ಬಗ್ಗೆ ಮಾತನಾಡಿರುವ ಯಶ್ ಒಂದಲ್ಲಾ ಒಂದು ದಿನ ಹೀರೋ ಆಗೇ ಆಗ್ತೀನಿ ಎನ್ನುವ ನಂಬಿಕೆಯಿತ್ತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನವೇ ಭರ್ಜರಿ ಸುದ್ದಿ ಕೊಟ್ಟ ರಶ್ಮಿಕಾ ಮಂದಣ್ಣ