ಬೆಂಗಳೂರು: ಕಿಚ್ಚ ಸುದೀಪ್ ಎಂದರೆ ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ. ಅಂತಹದ್ದೇ ಅಭಿಮಾನಿಗಳಿಬ್ಬರು ಕಿಚ್ಚನನ್ನು ನೋಡಲು 650 ಕಿ.ಮೀ. ದೂರ ನಡೆದೇ ಬಂದಿದ್ದಾರೆ.
ಗುಲ್ಬರ್ಗಾದಿಂದ ಇಬ್ಬರು ಮಹಿಳಾ ಅಭಿಮಾನಿಗಳು ಕಿಚ್ಚ ಸುದೀಪ್ ಭೇಟಿ ಮಾಡಲು ಬೆಂಗಳೂರುವರೆಗೆ 650 ಕಿ. ಮೀ. ಪಾದಯಾತ್ರೆ ಮಾಡಿದ್ದಾರೆ. ಇದಕ್ಕಾಗಿ 14 ದಿನ ತೆಗೆದುಕೊಂಡಿದ್ದಾರೆ.
ತಮಗಾಗಿ ಇಂತಹ ಸಾಹಸ ಮಾಡಿದ ಅಭಿಮಾನಿಗಳನ್ನು ಕಿಚ್ಚ ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದಾರೆ. ವಿಶೇಷವೆಂದರೆ ಸುದೀಪ್ ಅವರ ಎದುರು ಕೂರಲೂ ಇಷ್ಟಪಡದೇ ನಿಂತೇ ಮಾತನಾಡಿಸಿ ಗೌರವ ತೋರಿಸಿದ್ದಾರೆ.