Publish Date: Fri, 08 Apr 2022 (08:50 IST)
Updated Date: Fri, 08 Apr 2022 (08:52 IST)
ಬೆಂಗಳೂರು: ಏಪ್ರಿಲ್ 14 ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬೆಂಗಳೂರು ಮತ್ತು ವಿದೇಶದ ಕೆಲವೆಡೆ ಪರಭಾಷಾ ಅವತರಣಿಕೆಗಳೇ ಹೆಚ್ಚು ಬಿಡುಗಡೆಯಾಗ್ತಿವೆ ಎಂಬ ಆರೋಪ ಕೇಳಿಬಂದಿತ್ತು.
ಇದಕ್ಕೀಗ ಚಿತ್ರತಂಡ ಸ್ಪಂದಿಸಿದೆ. ಹೊಂಬಾಳೆ ಫಿಲಂಸ್ ಇದೀಗ ಬ್ರಿಟನ್ ನಲ್ಲಿ ಕನ್ನಡ ಶೋ ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿದೆ. ಸೋಮವಾರದ ವೇಳೆಗೆ ಇನ್ನಷ್ಟು ಶೋ ಸೇರ್ಪಡೆಯಾಗಲಿದೆ ಎಂದಿದೆ.
ಬೆಂಗಳೂರಿನಲ್ಲೂ ಪರಭಾಷಾ ಶೋಗಳೇ ಹೆಚ್ಚಿವೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೂ ಚಿತ್ರತಂಡ ಸೂಕ್ತ ಪ್ರತಿಕ್ರಿಯೆ ನೀಡಬಹುದು ಎಂಬ ವಿಶ್ವಾಸವಿದೆ.