Publish Date: Thu, 07 Apr 2022 (10:50 IST)
Updated Date: Thu, 07 Apr 2022 (10:52 IST)
ಹೈದರಾಬಾದ್: ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಇದೀಗ ನಟ ಅಲ್ಲು ಅರ್ಜುನ್ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಿದ್ದಾರೆ.
ಅಲ್ಲು ಅರ್ಜುನ್ ತಮ್ಮ ಕಾರಿಗೆ ಟಿಂಟ್ ಗ್ಲಾಸ್ ಬಳಕೆ ಮಾಡಿರುವ ಕಾರಣಕ್ಕೆ ಹೈದರಾಬಾದ್ ನಲ್ಲಿ ಸಂಚಾರಿ ಪೊಲೀಸರು 700 ರೂ. ದಂಡ ವಿಧಿಸಿದ್ದಾರೆ.
ತಮ್ಮ ರೇಂಜ್ ರೋವರ್ ಎಸ್ ಯುವಿ ಕಾರಿಗೆ ಟಿಂಟ್ ಗ್ಲಾಸ್ ಬಳಕೆ ಮಾಡಿದ್ದರಿಂದ ದಂಡ ತೆತ್ತಿದ್ದಾರೆ. ಇದಕ್ಕೆ ಮೊದಲು ಜೂ.ಎನ್ ಟಿಆರ್, ಮನೋಜ್ ಮಂಚು ಮುಂತಾದ ನಟರೂ ಇದೇ ರೀತಿ ಟಿಂಟ್ ಗ್ಲಾಸ್ ಬಳಸಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ತೆತ್ತಿದ್ದರು.