Publish Date: Sat, 25 Sep 2021 (09:15 IST)
Updated Date: Sat, 25 Sep 2021 (09:39 IST)
ಹೈದರಾಬಾದ್: ಬಹುಬೇಡಿಕೆ ನಟ ವಿಜಯ್ ದೇವರಕೊಂಡ ತಮ್ಮ ಅಮ್ಮನ ಮೇಲಿನ ಪ್ರೀತಿಗೆ ಅವರಿಗೆ ಮಲ್ಟಿಪ್ಲೆಕ್ಸ್ ಥಿಯೇಟರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಮ್ಮನ ಬರ್ತ್ ಡೇ ದಿನ ವಿಜಯ್ ದೇವರಕೊಂಡ ಈ ಉಡುಗೊರೆ ನೀಡಿದ್ದಾರೆ. ಹೊಸದಾಗಿ ನಿರ್ಮಾಣವಾಗಿರುವ ತನ್ನ ಮೊದಲ ಮಲ್ಟಿಪ್ಲೆಕ್ಸ್ ಥಿಯೇಟರ್ ಏಷ್ಯನ್ ವಿಜಯ್ ದೇವರಕೊಂಡ ಸಿನೆಮಾಸ್ ನ್ನು ಅಮ್ಮ ದೇವರಕೊಂಡ ಮಾಧವಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸದ್ಯಕ್ಕೆ ಗೋವಾದಲ್ಲಿ ಶೂಟಿಂಗ್ ನಲ್ಲಿರುವ ವಿಜಯ್ ಅಮ್ಮನಿಗೆ ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ. ಇನ್ನು, ವಿಜಯ್ ದೇವರಕೊಂಡ ಉಡುಗೊರೆ ನೋಡಿ ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ.