Publish Date: Fri, 24 Sep 2021 (17:01 IST)
Updated Date: Fri, 24 Sep 2021 (17:03 IST)
ಬೆಂಗಳೂರು: ಸ್ಯಾಂಡಲ್ ವುಡ್ ಮಂದಿಗೆ ಇಂದು ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುವ ನಿರೀಕ್ಷೆಯಿದೆ. ಥಿಯೇಟರ್ ನಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ‍್ಯತೆಯಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಇಂದೇ ಸಂಪೂರ್ಣ ಪ್ರೇಕ್ಷಕರಿಗೆ ಅನುಮತಿ ನೀಡುವ ಬಗ್ಗೆ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಈಗಾಗಲೇ ಸ್ಯಾಂಡಲ್ ವುಡ್ ನ ಪ್ರಮುಖರು ಚಿತ್ರರಂಗದ ಆರ್ಥಿಕ ಸಂಕಷ್ಟ ಮತ್ತು ಥಿಯೇಟರ್ ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಸಿಎಂಗೆ ಮನವಿಮಾಡಿದ್ದರು. ಅದಕ್ಕೀಗ ಬೆಲೆ ಸಿಗುವ ಸಾಧ್ಯತೆಯಿದೆ.