ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ-ಪ್ರಿಯಾಂಕ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಕೇರಳದ ವಯನಾಡಿನಲ್ಲಿರುವ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್ ಒಂದರಲ್ಲಿ ಉಪೇಂದ್ರ ದಂಪತಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ.
ಈ ಕ್ಷಣಗಳನ್ನು ಪ್ರಿಯಾಂಕ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉಪೇಂದ್ರ ದಂಪತಿ ಜೊತೆ ಇಡೀ ಕುಟುಂಬಸ್ಥರೂ ಜೊತೆಯಾಗಿದ್ದಾರೆ. ಅಂದ ಹಾಗೆ ಈ ಸ್ಯಾಂಡಲ್ ವುಡ್ ನ ರಿಯಲ್ ಕಪಲ್ ಮದುವೆಯಾಗಿ 18 ವರ್ಷ ಕಳೆದಿದೆ. ಇದನ್ನು ವಿಶೇಷವಾಗಿಯೇ ಆಚರಿಸಿಕೊಂಡಿದ್ದಾರೆ.