ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಈ ಸಿನಿಮಾಗೆ ಟೈಟಲ್ಲೇ ಇಲ್ಲ! 
									
			
			 
 			
 
 			
			                     
							
							
			        							
								
																	ಕುದುರೆ ಮೇಲೆ ವ್ಯಕ್ತಿಯೊಬ್ಬ ಸವಾರಿ ಮಾಡುವ ಚಿತ್ರವಿದ್ದು, ಕೆಳಗೆ ಆಂಗ್ಲ ಭಾಷೆಯ ಯು ಮಾದರಿಯ ಚಿಹ್ನೆಯಿದೆ. ಇದೇ ಟೈಟಲ್ ಎನ್ನಲಾಗಿದೆ.
									
										
								
																	ನಿಮಗೆ ಹೇಗೆ ಬೇಕೋ ಹಾಗೆ ಇದನ್ನು ಸ್ವೀಕರಿಸಬಹುದು ಎಂದು ಉಪೇಂದ್ರ ಹೇಳಿದ್ದಾರೆ. ಸಿನಿಮಾ ಪೋಸ್ಟರ್ ನೋಡಿದರೆ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಇಷ್ಟು ದಿನ ಪ್ರೋತ್ಸಾಹಿಸಿದ ಎಲ್ಲಾ ಅಭಿಮಾನಿಗಳಿಗೆ ಈ ಸಿನಿಮಾ ಅರ್ಪಣೆ ಎಂದು ಉಪೇಂದ್ರ ಹೇಳಿದ್ದಾರೆ.