ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮನ್ನಗಲಿದರೂ ಅವರನ್ನು ಅಭಿಮಾನಿಗಳು ಈಗಲೂ ಜೀವಂತವಾಗಿಟ್ಟಿದ್ದಾರೆ.
ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17 ರಂದು ಬಿಡುಗಡೆಯಾಗುತ್ತಿದೆ. ಜೇಮ್ಸ್ ಬಿಡುಗಡೆ ಸಂದರ್ಭದಲ್ಲಿ ಅಭಿಮಾನಿಗಳು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ.
ಈ ನಡುವೆ ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ನಲ್ಲಿ ಸೀಟ್ ಸಂಖ್ಯೆ 17 ರನ್ನು ಪುನೀತ್ ಗಾಗಿ ಮೀಸಲಿಡಲಾಗಿದೆ. ಮೊದಲ ಸಾಲಿನ 17 ನೇ ನಂಬರ್ ಸೀಟ್ ಜೇಮ್ಸ್ ಪ್ರದರ್ಶನದ ವೇಳೆ ಪುನೀತ್ ಗಾಗಿ ಮೀಸಲಾಗಿರಲಿದೆ. ಈ ಮೂಲಕ ಪ್ರೀತಿಯ ಅಪ್ಪುಗೆ ಗೌರವ ಸೂಚಿಸಲಾಗುತ್ತಿದೆ.